ರಾವಣ ನಗರಿ ಲಂಕೆ ಮರೆಯಲಾರದ ಇತಿಹಾಸ, ಭೌಗೋಳಿಕತೆ ಅದರದ್ದು.

7,662

ದೇಶವು, ಕಂಡ ಮಹತ್ವದ ಘಟನೆಗಳು ಮತ್ತು ಮಾನವನ ಪುರಾತತ್ತ್ವಶಾಸ್ತ್ರದ ಆವಿಷ್ಕಾರಗಳು ಹಾಗೂ ಕಾಲಾನುಕ್ರಮದಲ್ಲಿ ದೊರೆತ ದಾಖಲೆಗಳನ್ನು ಶ್ರೀಲಂಕಾದ ಇತಿಹಾಸ ಎಂದು ಕರೆಯಲಾಗುತ್ತದೆ. ಹಲವಾರು ಪುರಾತತ್ತ್ವಶಾಸ್ತ್ರದ ಸಾಕ್ಷ್ಯಾಧಾರ ಮತ್ತು ಮಾಹಿತಿ ವಿವರಗಳನ್ನು ಶ್ರೀಲಂಕನ್ನರು ಮತ್ತು ಶ್ರೀಲಂಕನ್ನೇತರರು ಬರೆದಿದ್ದಾರೆ, ಅವು ಸುಮಾರು 10,000 ವರ್ಷಗಳಿಗಿಂತಲೂ ಹೆಚ್ಚಿನ ಕಾಲದ ಇತಿಹಾಸವನ್ನು ದಾಖಲಿಸುತ್ತವೆ.

ಬಾಲಂಗೊಡ ಮಾನವ ‌ನ ಪುರಾತತ್ತ್ವಶಾಸ್ತ್ರದ ಶೋಧನೆಯು ಸುಮಾರು 30,000 ವರ್ಷಗಳಷ್ಟು ಹಿಂದಿನ ನಾಗರಿಕತೆಯ ಬಗ್ಗೆ ಸಾಕ್ಷ್ಯವನ್ನು ಒದಗಿಸುತ್ತದೆ. ಶ್ರೀಲಂಕಾದ ಪ್ರಸಿದ್ಧ ಕಾಲಾನುಕ್ರಮ ವರದಿಯೊಂದಿಗೆ ಮಹಾವಂಶ, ದೀಪವಂಶ, ಕುಲವಂಶ ಮತ್ತು ರಾಜವೆಲಿಯ ಮೊದಲಾದವು ಕ್ರಿ.ಪೂ. 6ನೇ ಶತಮಾನದಲ್ಲಿ ಸಿಂಹಳೀಯರ ರಾಜಪ್ರಭುತ್ವವು ಆರಂಭವಾದಂದಿನಿಂದ ಹಿಡಿದು ಹದಿನಾರನೇ ಶತಮಾನದಲ್ಲಿ ಯುರೋಪಿಯನ್ ವಸಾಹತುಶಾಹಿಗಳ ಆಗಮನ ಮತ್ತು 1815ರಲ್ಲಿ ರಾಜಪ್ರಭುತ್ವದ ಪದಚ್ಯುತಿಯವರೆಗಿನ ಶ್ರೀಲಂಕನ್ನರ ದಾಖಲಿತ-ಇತಿಹಾಸವನ್ನು ಹೊಂದಿವೆ. ಈ ರಾಷ್ಟ್ರದ ಬಗೆಗಿನ ಕೆಲವು ಐತಿಹಾಸಿಕ ದಾಖಲೆಗಳು ಪ್ರಸಿದ್ಧ ಭಾರತೀಯ ಪುರಾಣಗಳಾದ ವಾಲ್ಮೀಕಿ ಮುನಿಯ ರಾಮಾಯಣ, ಮಹಾಭಾರತ ಮತ್ತು ಗೌತಮ ಬುದ್ಧನ ಬೋಧನೆಗಳ ಪ್ರಾಚೀನ ಪುಸ್ತಕಗಳಲ್ಲೂ ಒಳಗೊಂಡಿವೆ.

ಹದಿನಾರನೇ ಶತಮಾನದ ನಂತರ, ರಾಷ್ಟ್ರದ ಕೆಲವು ಕರಾವಳಿ ಪ್ರದೇಶಗಳನ್ನು ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟೀಷರು ಆಳಿದರು. 1815ರ ನಂತರ ಸಂಪೂರ್ಣ ರಾಷ್ಟ್ರವನ್ನು ಬ್ರಿಟಿಷ್ ವಸಾಹತುಶಾಹಿಗಳು ಆಳ್ವಿಕೆ ನಡೆಸಿದರು. ನಂತರ 1948ರಲ್ಲಿ ರಾಜಕೀಯ ಸ್ವಾತಂತ್ರ್ಯವನ್ನು ನೀಡಲಾಯಿತು. ಅದಲ್ಲದೇ 1972ರ ನಂತರ ಇದು ಸಾರ್ವಭೌಮ ರಾಷ್ಟ್ರವಾಯಿತು. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಶ್ರೀಲಂಕನ್ನರು ನಡೆಸಿದ ಸಶಸ್ತ್ರ ದಂಗೆಗಳೆಂದರೆ 1818ರ ಯುವ ದಂಗೆ ಮತ್ತು 1848ರ ಮ್ಯಾಟಲೆ ದಂಗೆ .

1971ರ ಎಪ್ರಿಲ್ ದಂಗೆ ಎನ್ನುವ ಸಶಸ್ತ್ರ ಯುವ ದಂಗೆಯು ನಡೆದ ನಂತರ 1978ರಲ್ಲಿ ಹೊಸ ಸಂವಿಧಾನವು ಚಾಲ್ತಿಗೆ ಬಂದಿತು. ಅದರ ಕಾರ್ಯನಿರ್ವಾಹಕ ಅಧ್ಯಕ್ಷ ಪದವಿಗೇರಿದ ವ್ಯಕ್ತಿ ರಾಷ್ಟ್ರದ ಮುಖ್ಯಸ್ಥರಾದರು. ಶ್ರೀಲಂಕನ್ನರ ನಾಗರಿಕ ಕದನವು 1983ರಲ್ಲಿ ಆರಂಭವಾಯಿತು ಮತ್ತು ಮತ್ತೊಂದು ಸಶಸ್ತ್ರ ಯುವ ದಂಗೆಯು 1987-89ರಲ್ಲಿ ಸಂಭವಿಸಿತು. ಈ 26 ವರ್ಷಗಳ ನಾಗರಿಕ ಸಂಘರ್ಷ 2009ರ ವರ್ಷದಲ್ಲಿ ಕೊನೆಗೊಂಡಿತು.

ರಮ್ಯ

ಸಮಗ್ರಾಭೀವೃದ್ಧಿ ನ್ಯೂಸ್ ಡೆಸ್ಕ್

Leave A Reply

Your email address will not be published.