ʼಅಮೆಜಾನ್‌ʼನ ಅತಿ ದೊಡ್ಡ ಕ್ಯಾಂಪಸ್ ವಿಶೇಷತೆಗಳೇನು ಗೊತ್ತಾ.?

4,096

ಹೈದರಾಬಾದ್‌ನಲ್ಲಿ ಆನ್‌ಲೈನ್ ಶಾಪಿಂಗ್ ದೈತ್ಯ ಅಮೆಜಾನ್‌ ನ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಆಫೀಸ್ ಕ್ಯಾಂಪಸ್ ಶುರುವಾಗಿದೆ. ಅಮೆರಿಕಾದ ಹೊರಗೆ ಅಮೆಜಾನ್‌ ಒಡೆತನದ ಮೊದಲ ಕ್ಯಾಂಪಸ್ ಇದಾಗಿದೆ.

9.5 ಎಕರೆ ವಿಸ್ತೀರ್ಣದ ಈ ಕಟ್ಟಡ 282 ಅಡಿ ಎತ್ತರವಾಗಿದ್ದು, ಏಕಕಾಲದಲ್ಲಿ 15,000 ಸಿಬ್ಬಂದಿ ಕೆಲಸ ಮಾಡಬಹುದಂತೆ. ಈ ಕಟ್ಟಡಕ್ಕೆ ಐಫೆಲ್ ಟವರ್‌ ಗಿಂತ 2.5 ಪಟ್ಟು ಹೆಚ್ಚು ಸ್ಟೀಲ್ ಬಳಸಲಾಗಿದೆಯಂತೆ. ಈ ಸಂಕೀರ್ಣದಲ್ಲಿ 49 ಎಲಿವೇಟರ್‌ಗಳಿದ್ದು ಒಂದು ಸೆಕೆಂಡಿಗೆ ಒಂದು ಫ್ಲೋರ್ ಏರುತ್ತವಂತೆ.

ಒಟ್ಟು ನಿರ್ಮಾಣದ ಜಾಗ 68 ಎಕರೆಗಳಾಗಿದ್ದು, 65 ಫುಟ್‌ಬಾಲ್ ಅಂಗಳಗಳಷ್ಟು ವಿಸ್ತಾರವಾಗಿದೆಯಂತೆ. ಜೊತೆಗೆ ಪರಿಸರಕ್ಕಾಗಿ ಹಲವಾರು ಮರಗಳನ್ನು ಬೆಳೆಸಲಾಗಿದೆ.

3 ವರ್ಷದಲ್ಲಿ ಕಟ್ಟಡ ನಿರ್ಮಾಣವಾಗಿದ್ದು, ನ್ಯಾಷನಲ್ ಸೇಫ್ಟಿ ಕೌನ್ಸಿಲ್‌ನಿಂದ ಸುರಕ್ಷಿತ ಕಟ್ಟಡದ ಬಹುಮಾನ ಪಡೆದಿದೆ. ಸಿಬ್ಬಂದಿಗಳಿಗಾಗಿ ಹಲವು ಸೌಲಭ್ಯಗಳಿದ್ದು, ವಿವಿಧ ಧರ್ಮಗಳ ಪ್ರಾರ್ಥನಾ ಮಂದಿರ ಕೂಡ ಇದೆಯಂತೆ.

Leave A Reply

Your email address will not be published.