ಪೆಟ್ರೋಲ್‌ ಬಂಕ್‌ ಗಳ ಮೇಲೂ ಮೋಟಾರು ವಾಹನ ಕಾಯ್ದೆ ಪರಿಣಾಮ: ದಿನನಿತ್ಯ 5 ಕೋಟಿ ರೂ.ನಷ್ಟ

4,720

ಕೇಂದ್ರ ಸರಕಾರ ಇತ್ತೀಚಿಗೆ ಮೋಟಾರು ವಾಹನ ಕಾಯಿದೆ ತಿದ್ದುಪಡಿ ತಂದು ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ, ಭಾರಿ ದಂಡ ವಿಧಿಸುತ್ತಿದೆ. ಆದರೆ ಇದರ ಸೈಡ್ ಎಫೆಕ್ಟ್ ಇದೀಗ ಒಡಿಶಾದಲ್ಲಿ ಶುರುವಾಗಿದೆ.

ನೂತನ ಮೋಟಾರು ಕಾಯಿದೆಯಿಂದ ಭಾರಿ ತಂಡ ತೆರಬೇಕಾಗಿರುವುದರಿಂದ ಒಡಿಶಾದಲ್ಲಿ ಜನರು, ವಾಹನಗಳನ್ನು ಬಳಸುವುದೇ ಕಡಿಮೆ ಮಾಡಿದ್ದಾರೆ ಎನ್ನಲಾಗಿದ್ದು, ಇದರಿಂದ ಪೆಟ್ರೋಲಿಯಂ ಉದ್ಯಮ ಕುಸಿಯುವ ಭೀತಿ ಎದುರಾಗಿದೆ‌.

ವರದಿ ಪ್ರಕಾರ ಒಡಿಶಾದಲ್ಲಿ ಇದರಿಂದ ಪ್ರತಿನಿತ್ಯ ಐದು ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇದರಲ್ಲಿ 4.08 ಲಕ್ಷ ಲೀಟರ್ ಪ್ರೆಟ್ರೋಲ್ ಹಾಗೂ 12.45 ಲಕ್ಷ‌ ಲೀಟರ್ ಡಿಸೇಲ್ ಬಳಕೆ ಕಡಿಮೆಯಾಗಿದೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ಸ್ಥಳೀಯ ಪೆಟ್ರೋಲ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಉತ್ಕಲ್, ಮೋಟಾರು ಕಾಯಿದೆಯಿಂದ ಭಾರಿ ನಷ್ಟ ಉಂಟಾಗಿದೆ. ಒಡಿಶಾದಲ್ಲಿ ಪ್ರತಿನಿತ್ಯ ಐದು ಕೋಟಿ ರೂ. ನಷ್ಟವಾಗುತ್ತಿದೆ. ಇದರಲ್ಲಿ ರಾಜ್ಯ ಸರಕಾರದ 1.78 ಕೋಟಿ, ಕೇಂದ್ರದ 1.97 ಕೋಟಿ ರೂ. ನಷ್ಟವಾಗಲಿದೆ ಎಂದಿದ್ದಾರೆ.

Leave A Reply

Your email address will not be published.