ಇಮ್ರಾನ್ ಆಡಳಿತದಲ್ಲಿ ದೇಶದ ವಿದೇಶೀ, ಭದ್ರತಾ ನೀತಿಗಳ ಮೇಲೆ ಪಾಕ್ ಮಿಲಿಟರಿ ಪ್ರಭಾವ ತೀವ್ರ : ಯುಎಸ್ ವರದಿ

5,916

ಇಮ್ರಾನ್ ಖಾನ್ ಪ್ರಧಾನಿಯಾಗಿರುವ ಅವಧಿಯಲ್ಲಿ ಪಾಕಿಸ್ತಾನ ಮಿಲಿಟರಿ ದೇಶದ ವಿದೇಶಾಂಗ ನೀತಿ ಹಾಗೂ ಭದ್ರತೆ ನೀತಿಗಳ ಮೇಲೆ ಪ್ರಬಲ ಪ್ರಭಾವ ಬೀರುವ ಶಕ್ತಿಯನ್ನು ಉಳಿಸಿಕೊಂಡಿರುವುದಾಗಿ ಯುಎಸ್ ಕಾಂಗ್ರೆಸ್ ನ ವರದಿಯೊಂದು ಹೇಳಿದೆ.

ಕಾಂಗ್ರೆಸ್ಸಿನಲ್ ರಿಸರ್ಚ್ ಸರ್ವೀಸ್ (ಸಿಆರ್‌ಎಸ್) ಯುಎಸ್ ಶಾಸಕರ ಅವಗಾಹನೆಗಾಗಿ ಸಿದ್ದಪಡಿಸಿದ ವರದಿಯಲ್ಲಿ ಖಾನ್ ಪ್ರಸಕ್ತ ಚುನಾವಣೆಯನ್ನು ಗೆಲ್ಲುವ ಮುನ್ನ ಯಾವ ಆಡಳಿತ ಅನುಭವವಿದ್ದವರಲ್ಲ.ಪಾಕಿಸ್ತಾನದ ಭದ್ರತಾ ಸೇವೆಗಳು ಚುನಾವಣೆಯ ಸಮಯದಲ್ಲಿ ದೇಶೀಯ ರಾಜಕಾರಣವನ್ನು ಕುಶಲತೆಯಿಂದ ನಿರ್ವಹಿಸಿವೆ, ಇದರ ಹಿಂದೆ ಅಲ್ಲಿವರೆಗೆ ಪ್ರಧಾನಿಯಾಗಿದ್ದ ನವಾಜ್ ಶರೀಫ್ ಅವರನ್ನು ಕೆಳಗಿಳಿಸುವ ತಂತ್ರಗಾರಿಕೆ ಇತ್ತು ಎಂದು ವಿಶ್ಲೇಷಕರು ವಾದಿಸಿದರು.

ಖಾನ್ ಅವರ “ನಯಾ ಪಾಕಿಸ್ತಾನ” ಘೋಷಣೆ ಅನೇಕ ಕಿರಿಯ, ನಗರ, ಮಧ್ಯಮ ವರ್ಗದ ಮತದಾರರನ್ನು ಸೆಳೆದಿತ್ತು. ಭ್ರಷ್ಟಾಚಾರ-ವಿರೋಧಿ ಮತ್ತು ಉತ್ತಮ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ನೀಡುವ “ಕಲ್ಯಾಣ ರಾಜ್ಯ” ದ ರಚನೆಗೆ ಖಾನ್ ಮಹತ್ವ ನೀಡುವುದಾಗಿ ಹೇಳಿದ್ದರು. ಆದರೆ ಅವರ ಪ್ರಯತ್ನವು ದೇಶದಲ್ಲಿನ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಹೊಸ ವಿದೇಶಿ ಸಾಲ ಮತ್ತು ಸರ್ಕಾರದ ಕಠಿಣತೆಯ ಕಾರಣ ಸಾಕಷ್ಟು ಯಶಸ್ವಿಯಾಗಿಲ್ಲ ಎಂದು ವರದಿ ತಿಳಿಸಿದೆ. “ಹೆಚ್ಚಿನ ವಿಶ್ಲೇಷಕರು ಪಾಕಿಸ್ತಾನದ ಮಿಲಿಟರಿ ವಿದೇಶಿ ಮತ್ತು ಭದ್ರತಾ ನೀತಿಗಳ ಮೇಲೆ ಪ್ರಬಲ ಪ್ರಭಾವವನ್ನು ಉಳಿಸಿಕೊಳ್ಳುವುದನ್ನು ಗಮನಿಸಿದ್ದಾರೆ.

ಸಿಆರ್‌ಎಸ್ಯುಎಸ್ಕಾಂಗ್ರೆಸ್ ನ ಸ್ವತಂತ್ರ ಸಂಶೋಧನಾ ವಿಭಾಗವಾಗಿದೆ, ಇದು ಶಾಸಕರಿಗೆ ಅಗತ್ಯ ಆಸಕ್ತಿಯುತವಾದ ವಿಷಯಗಳ ಬಗೆಗೆ ವರದಿ ಸಿದ್ದಪಡಿಸಿ ನೀಡುತ್ತದೆ. . ಇದರ ವರದಿಯು ಯುಎಸ್ ಶಾಸಕರು ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗಲಿದೆ. ಆದರೆ ಇದನ್ನು ಕಾಂಗ್ರೆಸ್ಸಿನ ಅಧಿಕೃತ ವರದಿಯಾಗಿ ಪರಿಗಣಿಸಲಾಗುವುದಿಲ್ಲ.

ನವಾಜ್ ಶರೀಫ್ ಅವರನ್ನು ಅಧಿಕಾರದಿಂದ ತೆಗೆದುಹಾಕುವುದು ಮತ್ತು ಅವರ ಪಕ್ಷವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಪಾಕಿಸ್ತಾನದ ಭದ್ರತಾ ಸೇವೆಗಳು ಚುನಾವಣೆಯ ಮೊದಲು ಮತ್ತು ಚುನಾವಣೆ ವೇಳೆ ದೇಶೀಯ ರಾಜಕಾರಣವನ್ನು ರಹಸ್ಯವಾಗಿ ನಿರ್ವಹಿಸಿವೆ ಎಂದು ಅನೇಕ ವಿಶ್ಲೇಷಕರು ವಾದಿಸಿದ್ದಾರೆ ಎಂದು ಸಿಆರ್‌ಎಸ್ ಹೇಳಿದೆ.

Leave A Reply

Your email address will not be published.