ಈ ನಿರಾಶ್ರಿತರ ಕೇಂದ್ರದಲ್ಲಿ ತುತ್ತು ಅನ್ನಕ್ಕೂ ತಾತ್ವಾರ : ಮಂಡಕ್ಕಿ ತಿಂದು ಬದುಕುತ್ತಿರುವ ನಿರಾಶ್ರಿತರು

4,582

ಬೆಳಗಾವಿ : ನೆರೆ, ಪ್ರವಾಹ ಪೀಡಿತವಾಗಿರುವ ರಾಜ್ಯದ ಅನೇಕ ಭಾಗಗಳಲ್ಲಿ, ನೆರೆ ಸಂತ್ರಸ್ತರಿಗಾಗಿ ಸರ್ಕಾರದಿಂದಲೇ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ. ಹೀಗೆ ರಾಯಭಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ತೆರೆದಿರುವ ನಿರಾಶ್ರಿತರ ಕೇಂದ್ರವನ್ನು ಕಳೆದ ನಿನ್ನೆ ಬಂದ್ ಮಾಡಿದ ಕಾರಣ, ತುತ್ತು ಅನ್ನಕ್ಕೂ ತಾತ್ವಾರ ಉಂಟಾಗಿ ರಾತ್ರಿ ಮಂಡಕ್ಕಿ ತಿಂದು ಬದುಕು ಸಾಗಿಸಿದ್ದಾರೆ.

ರಾಜ್ಯದಲ್ಲಿ ಉಂಟಾದ ನೆರೆ, ಪ್ರವಾಹ ಪರಿಸ್ಥಿತಿ ಇದೀಗ ಎಲ್ಲೆಡೆ ತಗ್ಗಿದೆ. ಇದೀಗ ಏನಿದ್ದರೂ ಪರಿಹಾರ ಕ್ರಮಕ್ಕೆ ದೊಡ್ಡ ಸವಾಲಾಗಿದೆ. ಹೀಗಾಗಿ ನಿರಾಶ್ರಿತರಿಗಾಗಿ ತೆರೆದಿದ್ದ ಅನೇಕ ಕಡೆಯಲ್ಲಿನ ಕೇಂದ್ರಗಳನ್ನು ಇದೀಗ ಸರ್ಕಾರ ಬಂದ್ ಮಾಡುತ್ತಿದೆ. ಹೀಗೆ ಬಂದ್ ಮಾಡಿದ್ದರಿಂದ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕೋಳಿ ಗುಡ್ಡ ಗ್ರಾಮದಲ್ಲಿನ ಕನ್ನಡ ಶಾಲೆಯ ನಿರಾಶ್ರಿತರ ಕೇಂದ್ರದ ನಿರಾಶ್ರಿತರು, ತುತ್ತು ಅನ್ನಕ್ಕೂ ತಾತ್ವಾರ ಎಂದುರಿಸುವಂತಾಗಿದೆ.

ಕಳೆದ ನಿನ್ನೆಯಿಂದ ನೆರೆ ಕಡಿಮೆಯಾಗಿದೆ, ಪ್ರವಾಹ ಇಳಿದಿದೆ ಎನ್ನುವ ಕಾರಣಕ್ಕಾಗಿ ಕೋಳಿಗುಡ್ಡ ಗ್ರಾಮದಲ್ಲಿನ ಕನ್ನಡ ಶಾಲೆಯಲ್ಲಿ ತೆರೆಯಲಾಗಿದ್ದ ನಿರಾಶ್ರಿತರ ಕೇಂದ್ರವನ್ನು ಮುಚ್ಚಲಾಗಿದೆ. ಏಕಾಏಕಿ ರಾತ್ರೋ ರಾತ್ರಿ ಬಂದ್ ಮಾಡಿದ ಪರಿಣಾಮ, ಕೇಂದ್ರದಲ್ಲಿದ್ದ ನೂರಾರು ನಿರಾಶ್ರಿತರು ಹೊಟ್ಟೆಗೆ ಅನ್ನವಿಲ್ಲದೇ ರಾತ್ರಿ ಮಂಡಕ್ಕಿ ತಿಂದು ಮಲಗುವಂತಾಯಿತು.

ಒಟ್ಟಾರೆಯಾಗಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಳಿಗುಡ್ಡ ಗ್ರಾಮದ ನಿರಾಶ್ರಿತರ ಕೇಂದ್ರದಲ್ಲಿನ ಜನರು ಮಂಡಕ್ಕಿ ತಿಂದು ಮಲಗುವಂತಾಯಿತು. ಈ ಮೂಲಕ ಇಡೀ ರಾತ್ರಿ ಅನ್ನವಿಲ್ಲದೇ ಹಸಿವಿನಿಂದಲೇ ರಾತ್ರಿ ಕಳೆಯುವಂತ ಪರಿಸ್ಥಿತಿಯನ್ನು ಎದುರಿಸಬೇಕಾಯಿತು.

Leave A Reply

Your email address will not be published.