ಕಾಶ್ಮೀರದಲ್ಲಿ ಈದ್ ಪ್ರಾರ್ಥನೆ ಶಾಂತಿಯುತವಾಗಿ ಸಾಗಿದೆ: ಪೊಲೀಸರು

5,754

ಜಮ್ಮು-ಕಾಶ್ಮೀರ: ಕಾಶ್ಮೀರ ಕಣಿವೆಯಲ್ಲಿ ಯಾವುದೇ ಹಿಂಸಾಚಾರಗಳು ನಡೆಯದೆ ಶಾಂತಿಯುತವಾಗಿ ಈದ್ ಆಚರಣೆ ನೆರವೇರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದೆ.ಜನರು ಆತಂಕ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಈ ಮಧ್ಯೆ ಈದ್ ಆಚರಣೆಗೆ ಮುಸ್ಲಿಂ ಬಾಂಧವರಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅಧಿಕಾರಿಗಳು ಸಕಲ ವ್ಯವಸ್ಥೆ ಮಾಡಿದ್ದರು.

ಜನರು ಸಾಮೂಹಿಕವಾಗಿ, ಬೃಹತ್ ಸಂಖ್ಯೆಯಲ್ಲಿ ಒಟ್ಟಿಗೆ ಹೋಗಲು ಅವಕಾಶ ನೀಡಿರಲಿಲ್ಲ. ಕಾಶ್ಮೀರದ ಹಲವು ಭಾಗಗಳಲ್ಲಿ ಈದ್ ಪ್ರಾರ್ಥನೆ ಶಾಂತಿಯುತವಾಗಿ ಮುಗಿದಿದೆ. ಯಾವುದೇ ಅಹಿತಕರ ಘಟನೆ ಇದುವರೆಗೆ ವರದಿಯಾಗಿಲ್ಲ ಎಂದು ಅಲ್ಲಿನ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಹಲವು ಮಸೀದಿಗಳಲ್ಲಿ ಅಧಿಕಾರಿಗಳು ಸಿಹಿತಿಂಡಿ ವಿತರಿಸಿದರು. ಈದ್ ಆಚರಣೆ ವೇಳೆ ಜನರು ಅಂಗಡಿಗಳಿಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಕೂಡ ಅವಕಾಶ ಮಾಡಿಕೊಡಲಾಗಿತ್ತು. ಆಹಾರ ಪದಾರ್ಥಗಳು ಮತ್ತು ಅಗತ್ಯ ವಸ್ತುಗಳು ಜನರ ಮನೆಬಾಗಿಲಿನಲ್ಲಿ ಸಿಗುವ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಆದರೆ ಕಳೆದ ವರ್ಷದವರೆಗೆ ಈದ್ ಆಚರಣೆ ವೇಳೆ ಇದ್ದಂತಹ ಸಂಭ್ರಮ-ಸಡಗರ ಈ ವರ್ಷ ಕಾಶ್ಮೀರದಲ್ಲಿ ಕಂಡುಬರಲಿಲ್ಲ.

Leave A Reply

Your email address will not be published.