ಗುಜರಾತಿನಲ್ಲಿ ಅಪಾರ್ಟ್‌ಮೆಂಟ್ ಕುಸಿತ: ನಾಲ್ವರು ಸಾವು, ಹಲವರು ಸಿಲುಕಿರುವ ಶಂಕೆ

4,719

ಖೇಡಾ, ಆಗಸ್ಟ್ 10: ಅಪಾರ್ಟ್ ಮೆಂಟ್ ಕಟ್ಟಡ ಕುಸಿದ ಕಾರಣ ನಾಲ್ವರು ಮೃತಪಟ್ಟು ಹಲವರು ಅವಶೇಷಗಳಡಿ ಸಿಕ್ಕಿ ಗಾಯಗೊಂಡಿರುವ ಘಟನೆ ಗುಜರಾತಿನ ಖೇಡಾದಲ್ಲಿ ನಡೆದಿದೆ.

ಅಪಾರ್ಟ್ ಮೆಂಟ್ ಅನ್ನು ಗುಜರಾತ್ ವಸತಿ ಮಂಡಳಿ ನಿರ್ಮಾಣ ಮಾಡಿತ್ತು. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ಡಿಆರ್‌ಎಫ್) ಜೊತೆಗೆ ನಾಡಿಯಾಡ್, ವಡೋದರಾ, ಆನಂದ್ ಮತ್ತು ಅಹಮದಾಬಾದ್‌ನ ಅಗ್ನಿಶಾಮಕ ಸಿಬ್ಬಂದಿ ತಂಡಗಳು ಸ್ಥಳದಲ್ಲಿದ್ದು ಇದುವರೆಗೆ ಎಂಟು ಜನರನ್ನು ರಕ್ಷಿಸಿದೆ.

ಖೇಡಾದ ಪ್ರಗತಿನಗರದಲ್ಲಿರುವ ಮೂರು ಅಂತಸ್ತಿನ ಅಪಾರ್ಟ್ ಮೆಂಟ್ ಕಟ್ಟಡ ಶುಕ್ರವಾರ ತಡರಾತ್ರಿ ಕುಸಿದಿದೆ. ಭಗ್ನಾವಶೇಷಗಳ ಅಡಿಯಲ್ಲಿ ಇನ್ನೂ ಜನರು ಸಿಕ್ಕಿಕೊಂಡಿರುವ ಶಂಕೆ ಇದ್ದು ಸ್ಥಳದಲ್ಲಿ ಆತಂಕ ಮನೆಮಾಡಿದೆ.

Leave A Reply

Your email address will not be published.