ಭಾರತಕ್ಕೆ ಸಿಹಿ ಸುದ್ದಿ: ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ತಪ್ಪಿತಸ್ಥ, ಪಾಕ್ ಕೋರ್ಟ್

4,706

ಇಸ್ಲಾಮಾಬಾದ್: ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಆರೋಪದಲ್ಲಿ ಬಂಧಿತನಾಗಿರುವ ಉಗ್ರ, ಮುಂಬೈ ಸ್ಫೋಟ ಪ್ರಕರಣದ ರೂವಾರಿ ಹಫೀಜ್ ಸಯೀದ್ ತಪ್ಪಿತಸ್ಥನೆಂದು ಪಾಕಿಸ್ತಾನದ ಗುಜ್ರನ್ ವಾಲಾ ನ್ಯಾಯಾಲಯ ಪರಿಗಣಿಸಿರುವುದಾಗಿ ಸ್ಥಳೀಯ ಮಾಧ್ಯಮಗಳ ವರದಿ ತಿಳಿಸಿದೆ. ಅಲ್ಲದೆ ಈ ಪ್ರಕರಣವನ್ನು ಪಾಕಿಸ್ತಾನಕ್ಕೆ ಸೇರಿದ ಗುಜರಾತ್ ಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗಿದೆ.

ಭಯೋತ್ಪಾದನೆಗೆ ಹಣದ ನೆರವು ನೀಡಿದ ಆರೋಪದಲ್ಲಿ ಜಮಾತ್ ಉದ್ ದವಾ ಮುಖ್ಯಸ್ಥ, 26/11ರ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನನ್ನು ಪಾಕಿಸ್ತಾನದ ಅಧಿಕಾರಿಗಳು ಜುಲೈ 17ರಂದು ಬಂಧಿಸಿದ್ದರು. ನಂತರ 7 ದಿನಗಳ ಆತನ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳವರೆಗೆ ವಿಸ್ತರಿಸಲಾಗಿತ್ತು.

ಹಫೀಜ್ ಸಯೀದ್ ವಿರುದ್ಧದ ಸಂಪೂರ್ಣ ಆರೋಪಪಟ್ಟಿಯನ್ನು ಆಗಸ್ಟ್ 7ರೊಳಗೆ ಸಲ್ಲಿಸುವಂತೆ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ)ಗೆ ನ್ಯಾಯಾಲಯ ನಿರ್ದೇಶಿಸಿತ್ತು ಎಂದು ಜಿಯೋ ನ್ಯೂಸ್ ತಿಳಿಸಿದೆ.

Leave A Reply

Your email address will not be published.