ಬಾಬ್ರಿ ಮಸೀದಿ ಹಕ್ಕನ್ನು ಪ್ರತಿಪಾದಿಸಲು ದಾಖಲೆ ನೀಡಿ: ಸುಪ್ರೀಂ

4,683

ಲಕ್ನೋ, ಆಗಸ್ಟ್ 07: ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ಆಗಸ್ಟ್ 06ರಿಂದ ಪ್ರತಿದಿನ ವಿಚಾರಣೆ ಆರಂಭವಾಗಿದೆ. ಬಾಬ್ರಿ ಮಸೀದಿ ಹಕ್ಕನ್ನು ಪ್ರತಿಪಾದಿಸಲು ಮುಂದಾಗಿರುವ ನಿರ್ಮೋಹಿ ಅಖಾಡಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ಸುಪ್ರೀಂಕೋರ್ಟ್ ನ್ಯಾಯಪೀಠ ಸೂಚಿಸಿದೆ.

ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿರುವ ಸಂಧಾನಕಾರರು ತಮ್ಮ ವರದಿಯನ್ನು ಸಲ್ಲಿಸಿದೆ. ಆದರೆ, ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿತ್ಯ ವಿಚಾರಣೆ ಆರಂಭಿಸಿದೆ.

1934ರಲ್ಲೇ ಮುಸ್ಲಿಮರು ಬಾಬ್ರಿ ಕಟ್ಟಡದ ಜಾಗದಲ್ಲಿ ಪ್ರತಿ ದಿನ 5 ಬಾರಿ ನಮಾಜ್ ಮಾಡುವುದನ್ನು ಬಿಟ್ಟಿದ್ದರು. 1949ರ ಡಿಸೆಂಬರ್ 22-23ರಂದು ರಾತ್ರಿ ವಿವಾದಿತ ಕಟ್ಟಡದಲ್ಲಿ ರಾಮನ ವಿಗ್ರಹಗಳನ್ನು ಸ್ಥಾಪಿಸಲಾಯಿತು, 1949ರ ಡಿಸೆಂಬರ್ ವೇಳೆಗೆ ಶುಕ್ರವಾರದ ಪ್ರಾರ್ಥನೆಯನ್ನು ನಿಲ್ಲಿಸಲಾಗಿದೆ.1961 ರಲ್ಲಿ ಸುನ್ನಿ ವಕ್ಪ ಬೋರ್ಡ್ ಆ ಜಾಗದ ಮೇಲೆ ಹಕ್ಕು ಪ್ರತಿಪಾದನೆ ಮಾಡಿತ್ತು ಎಂದು ನಿರ್ಮೋಹಿ ಅಖಾಡದ ಪರ ವಕೀಲರು ವಾದ ಮಂಡಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, “ಯಾವ ಜಾಗದಲ್ಲಿ ನಿತ್ಯ ಪ್ರಾರ್ಥನೆ ನಡೆಯುವುದಿಲ್ಲವೋ ಅದನ್ನು ಮಸೀದಿ ಎಂದು ಪರಿಗಣಿಸಲು ಸಾಧ್ಯವಿಲ್ಲ, ನಾವು 1934 ರಿಂದಲೂ ಅಯೋಧ್ಯೆಯ ವಿವಾದಿತ ಪ್ರದೇಶದ ಮೇಲೆ ಹಕ್ಕು ಪ್ರತಿಪಾದನೆ ಮಾಡುತ್ತಿದ್ದೇವೆ, ಅಲ್ಲಿ ನಮಾಜ್ ನಡೆಯುತ್ತಿರಲಿಲ್ಲ” ಎಂದು ನಿರ್ಮೋಹಿ ಅಖಾಡದ ಪರ ವಕೀಲ ಸುಶೀಲ್ ಜೈನ್ ಹೇಳಿದ್ದಾರೆ.

ಈ ಕುರಿತಂತೆ ನಿಮ್ಮ ಹಕ್ಕನ್ನು ಪ್ರತಿಪಾದಿಸಲು ರಾಮಜನ್ಮಭೂಮಿ ಕುರಿತ ಕಡತ, ದಾಖಲೆ, ವಾಕ್ ದಾಖಲೆ ಅಥವಾ ಕಂದಾಯ ಪತ್ರ ಇದ್ದರೆ ನೀಡಿ ಎಂದು ಸುಪ್ರೀಂಕೋರ್ಟ್ ಕೇಳಿದೆ. ಆದರೆ, 1982ರಲ್ಲಿ ಡಕಾಯಿತಿ ನಡೆದು ಅನೇಕ ದಾಖಲೆಗಳು ನಾಶವಾಗಿವೆ ಎಂದು ನಿರ್ಮೋಹಿ ಅಖಾಡ ಪರ ವಕೀಲ ಜೈನ್ ತಿಳಿಸಿದರು.

Leave A Reply

Your email address will not be published.