ಆರ್‌ಬಿಐ ಹಣಕಾಸು ನೀತಿ: ಎಂಪಿಸಿ ರೆಪೊ ದರ 35 ಬಿಪಿಎಸ್‌ನಿಂದ ಶೇ. 5.4ಕ್ಕೆ ಇಳಿಕೆ

5,744

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇಂದು ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ಶಕ್ತಿಕಾಂತ ದಾಸ್ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಸತತ ನಾಲ್ಕನೇ ಬಾರಿಗೆ ಆರ್‌ಬಿಐ ತನ್ನ ರೆಪೊ ದರದಲ್ಲಿ 35 ಬೇಸಿಸ್ ಪಾಯಿಂಟ್‌ (ಬಿಪಿಎಸ್) ಕಡಿತಗೊಳಿಸಿದೆ.

ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು 35 ಬಿಪಿಎಸ್ ನಿಂದ ಶೇ. 5.4ಕ್ಕೆ ಕಡಿತಗೊಳಿಸಿದೆ. ರಿವರ್ಸ್ ರೆಪೊವನ್ನು ಶೇ. 5.15ಕ್ಕೆ ಕಡಿತಗೊಳಿಸಲಾಗಿದೆ. 2019-20ರ ಜಿಡಿಪಿ ಬೆಳವಣಿಗೆಯನ್ನು ಜೂನ್ ನಲ್ಲಿನ ಶೇ. 7 ರಿಂದ ಶೇ. 6.9ಕ್ಕೆ ಇಳಿಸಲಾಗಿದೆ.

ಆರ್ಬಿಐ ಹಣಕಾಸು ನಿತಿಯು ರೆಪೊ ದರ ಕಡಿತಗೊಳಿಸಿರುವುದರಿಮದ ಜನಸಾಮಾನ್ಯರಿಗೆ ಹೆಚ್ಚು ಪ್ರಯೋಜನ ಸಿಗಲಿದ್ದು, ಗೃಹ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ.

ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ಆರ್ಥಿಕ ಕುಸಿತ, ಕಡಿಮೆ ಹಣದುಬ್ಬರ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟು ನಿರ್ಧಾರ ರೂಪಿಸಿದೆ.

Leave A Reply

Your email address will not be published.