ಆರ್ಬಿಐ ಹಣಕಾಸು ನೀತಿ ಪ್ರಕಟ: ರೆಪೊ ದರ ಕಡಿತ ಸಾಧ್ಯತೆ

5,906

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇಂದು ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲಿದೆ.ಕಳೆದ ವರ್ಷ ಡಿಸೆಂಬರ್‌ನಲ್ಲಿ ಶಕ್ತಿಕಾಂತ ದಾಸ್ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಸತತ ನಾಲ್ಕನೇ ಬಾರಿಗೆ ಆರ್‌ಬಿಐ ತನ್ನ ರೆಪೊ ದರ ದಲ್ಲಿ 25 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಕಡಿತಗೊಳಿಸುವ ನಿರೀಕ್ಷೆಯಿದೆ.

ವಿತ್ತೀಯ ನೀತಿ ಸಮಿತಿಯು (ಎಂಪಿಸಿ)ಆರ್ಥಿಕ ಕುಸಿತ, ಕಡಿಮೆ ಹಣದುಬ್ಬರ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟು ನಿರ್ಧಾರವನ್ನು ರೂಪಿಸಲಿದೆ ಎನ್ನಲಾಗಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸ್ಥೂಲವಾಗಿ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಿದ್ದು, ದ್ವೈಮಾಸಿಕ ಹಣಕಾಸು ನೀತಿಯನ್ನು ಇಂದು ಪ್ರಕಟಿಸಲಿದೆ.

ಆರ್ಬಿಐ ದ್ವೈಮಸಿಕ ಸಾಲ ನೀತಿ ಕಡಿತಗೊಳಿಸಿದರೆ ಸಾಲದ ಮೇಲಿನ ಬಡ್ಡಿದರವನ್ನು ಶೇ. 0.25ರಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಿಸಿದ್ದಾರೆ. ಇವತ್ತು ರೆಪೊ ದರ ಕಡಿತಗೊಂಡರೆ ಸತತ ನಾಲ್ಕನೇ ಬರಿ ಬಡ್ಡಿದರ ಇಳಿಕೆಯಾಗಲಿದೆ. ದೇಶದ ಆರ್ಥಿಕತೆ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಆರ್ಥಿಕತೆಗೆ ಚೇತರಿಕೆ ನೀಡಲು ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಹಣದುಬ್ಬರ ಶೇ. 4ಕ್ಕಿಂತ ಕಡಿಮೆಯಿರುವುದರಿಂದ ಬಡ್ಡಿದರ ಇಳಿಕೆಗೆ ತೊಡಕಾಗದು ಎನ್ನಲಾಗಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)ಹಣದುಬ್ಬರವು ಜೂನ್‌ನಲ್ಲಿ ಶೇ. 3.18ಕ್ಕೆ ಏರಿತು. ಆದರೆ ಇದು ಆರ್‌ಬಿಐನ ಮಧ್ಯಮ ಅವಧಿಯ ಗುರಿ ಶೇ. 4ಕ್ಕಿಂತ ಕಡಿಮೆಯಾಗಿದೆ. ಆದಾಗ್ಯೂ, ಸಿಪಿಐ ಅನ್ನು ಲೆಕ್ಕಾಚಾರ ಮಾಡುವಾಗ ಆಹಾರದ ಬೆಲೆಗಳು ಶೇ. 46ರಷ್ಟು ಮೌಲ್ಯ ಹೊಂದಿರುವುದರಿಂದ ಭಾರತದಲ್ಲಿ ಹಣದುಬ್ಬರದ ಪಥವು ಮಾನ್ಸೂನ್ ಮೇಲೆ ಗಣನೀಯವಾಗಿ ಅವಲಂಬಿತವಾಗಿದೆ.

Leave A Reply

Your email address will not be published.