ಎಲ್ಲಿ ನಿರ್ಮಾಣವಾಗಲಿದೆ ಗೊತ್ತಾ ಈ ಹೋಟೆಲ್.?

5,746

ಟರ್ಕಿಯ ಸ್ಟುಡಿಯೋವೊಂದು ‘ಅಂಚಿನಲ್ಲಿ ವಾಸಿ’ ಎಂಬ ಪದಕ್ಕೆ ಹೊಸ ಅರ್ಥವನ್ನು ನೀಡಲು ಮುಂದಾಗಿದೆ. ಇಸ್ತಾಂಬುಲ್ ಮೂಲದ ವಾಸ್ತುಶಿಲ್ಪ ವಿನ್ಯಾಸಕಾರ ಹೇರಿ ಅಟಾಕ್, ದಕ್ಷಿಣ ನಾರ್ವೆಯಲ್ಲಿ 1,981 ಅಡಿಯ ದೊಡ್ಡ ಬಂಡೆಯ ಬದಿಯಲ್ಲಿ ಹೋಟೆಲ್ ನಿರ್ಮಿಸುವ ಪ್ರಸ್ತಾವನೆ ಮುಂದಿರಿಸಿದ್ದಾನೆ.

ವಿನ್ಯಾಸಗೊಳಿಸಲಿರುವ ಪ್ರಸ್ತಾವಿತ ಹೋಟೆಲ್, ಮೇಲಿನ ಡೆಕ್‌ನಲ್ಲಿ ಮೂರು ಮಹಡಿಗಳನ್ನು ಹೊಂದಿರಲಿದ್ದು, ಅಲ್ಲಿ ದೊಡ್ಡ ವೀಕ್ಷಣಾ ವೇದಿಕೆಗಳು ಇರಲಿವೆ. ಪ್ರತಿ ಅಂತಸ್ತಿನಲ್ಲೂ ಚಾಚಿಕೊಂಡಿರುವ ಬಾಲ್ಕನಿ ಇರುತ್ತದೆ. ನೋಡಲು ಬಂದ ಅತಿಥಿಗಳು ನಾರ್ವೆಯ ಅದ್ಭುತ ನೋಟವನ್ನು ಇಲ್ಲಿಂದ ನೋಡಿ, ಆನಂದಿಸಬಹುದು.

ಹೋಟೆಲ್ ನ ಮತ್ತೊಂದು ಆಕರ್ಷಣೆ ಎಂದ್ರೆ ಸ್ಪಷ್ಟವಾಗಿ ತಳ ಕಾಣುವ ಈಜುಕೊಳ. ಸಾಹಸಿಗರು ಈಜುವಾಗ ತಳಭಾಗದ ಸುಂದರವಾದ ದೃಶ್ಯಾವಳಿಗಳನ್ನು ನೋಡಬಹುದಾಗಿದೆ.

ವಾಸ್ತುಶಿಲ್ಪಿ ಹೇರಿ ಅಟಾಕ್, ಬಂಡೆಯ ಅಂಚನ್ನೂ ಮೀರಿ ಬದುಕುವ ಕಲ್ಪನೆಯಿಂದ ನಾನು ಆಕರ್ಷಿತನಾಗಿದ್ದಾನೆ. ಅಲ್ಲದೇ, ಪಲ್ಪಿಟ್ ರಾಕ್ ಅತ್ಯಂತ ರೋಮಾಂಚಕಾರಿ ಸ್ಥಳಗಳಲ್ಲಿ ಒಂದಾಗಿದೆ ಎಂದಿದ್ದಾರೆ

Leave A Reply

Your email address will not be published.