ಪಾಕ್ ಸೇನಾ ವಿಮಾನ ಪತನ: 17 ಮಂದಿ ಮೃತ್ಯು

4,723

ಇಸ್ಲಾಮಾಬಾದ್: ಪಾಕಿಸ್ತಾನ ಸೇನಾ ವಿಮಾನವೊಂದು ತರಬೇತಿ ಹಾರಾಟದ ವೇಳೆ ರಾವಲ್ಪಿಂಡಿ ನಗರದಲ್ಲಿ ಪತನಗೊಂಡು ಐದು ಮಂದಿ ಸಿಬ್ಬಂದಿ ಹಾಗೂ 12 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಸೇನೆಯ ಸಂವಹನ ವಿಭಾಗ ಪ್ರಕಟಿಸಿದೆ.

ವಿಮಾನ ಪತನದಿಂದಾಗಿ ನಗರದಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಮತ್ತೆ 12 ಮಂದಿ ನಾಗರಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪರಿಹಾರ ತಂಡಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾದವು ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Leave A Reply

Your email address will not be published.