ಭೂಷಣ್ ಸ್ಟೀಲ್ ಕಂಪನಿಯಿಂದ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ಗೆ 238 ಕೋಟಿ ವಂಚನೆ

5,747

ಸರ್ಕಾರಿ ಸ್ವಾಮ್ಯದ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ (ಪಿಎಸ್ಬಿ) ಭೂಷಣ್ ಪವರ್ ಮತ್ತು ಸ್ಟೀಲ್ ಕಂಪನಿ ರೂ. 238 ಕೋಟಿ ವಂಚನೆ ಪ್ರಕರಣವನ್ನು ವರದಿ ಮಾಡಿದೆ.

ಇತ್ತೀಚೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕುಗಳು ಇದೇ ರೀತಿಯ ವಂಚನಾ ಪ್ರಕರಣಗಳನ್ನು ಬಹಿರಂಗಪಡಿಸಿದ್ದವು. ಈ ತಿಂಗಳ ಹಿಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಭೂಷಣ್ ಪವರ್ ಮತ್ತು ಸ್ಟೀಲ್ ಕಂಪನಿಯು ರೂ.3,805.15 ಕೋಟಿ ವಂಚನೆ ಕುರಿತು ಆರ್‌ಬಿಐಗೆ ವರದಿ ನೀಡಿತ್ತು.

ವಜ್ರ ಉದ್ಯಮಿ ನಿರವ್ ಮೋದಿಯು ಪಿಎನ್ಬಿ ಬ್ಯಾಂಕ್ ಗೆ ರೂ. 13 ಸಾವಿರ ಕೋಟಿ ವಂಚಿಸಿದ ಪ್ರಕರಣ ಬಗೆಹರಿಯುವ ಮುನ್ನವೇ ಭೂಷಣ್ ಪವರ್ ಮತ್ತು ಸ್ಟೀಲ್ ಕಂಪನಿ ವಂಚನಾ ಪ್ರಕರಣ ಬೆಳಕಿಗೆ ಬಂದಿದೆ.

ಬ್ಯಾಂಕಿನಿಂದ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು “ಫೋರೆನ್ಸಿಕ್ ಆಡಿಟ್ ತನಿಖೆ” ಆಧಾರದ ಮೇಲೆ ಕಂಪನಿ ಮತ್ತು ಅದರ ನಿರ್ದೇಶಕರ ವಿರುದ್ಧ ಆರೋಪಿಸಿ, ಆರ್‌ಬಿಐಗೆ ರು. 238.30 ಕೋಟಿ ವಂಚನೆ ಪ್ರಕರಣವನ್ನು ವರದಿ ಮಾಡಿದೆ.

ಭೂಷಣ್ ಪವರ್ ಮತ್ತು ಸ್ಟೀಲ್ ಕಂಪನಿ ಬ್ಯಾಂಕ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, ತನ್ನ ಅಡಿಟಿಂಗ್ ಪತ್ರಗಳಲ್ಲಿ ವಂಚನೆ ಮಾಡಿ ಬ್ಯಾಮಕಿನಿಂದ ಹಣ ಪಡೆದಿದೆ ಎಂದು ಪಿಎನ್ಬಿ ಹೇಳಿದೆ.

ಬ್ಯಾಂಕ್ ಲೆಕ್ಕಪತ್ರ ಹಾಗು ಸಿಬಿಐ ನೀಡಿರುವ ಎಫ್‌ಐಆರ್ ಹಿನ್ನೆಲೆಯಲ್ಲಿ ಭೂಷಣ್ ಪವರ್ ಮತ್ತು ಸ್ಟೀಲ್ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್ ಕೋರಿದೆ.

ಪ್ರಸ್ತುತ ಪ್ರಕರಣವು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಟಿ)ಯಲ್ಲಿದ್ದು, ಶೀಘ್ರದಲ್ಲೇ ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ ವಾರ, ಬಿಎಸ್ಪಿಎಲ್ ಕಂಪನಿಯು ರೂ. 1,774.82 ಕೋಟಿ ವಂಚನೆ ಮಾಡಿ ಬ್ಯಾಂಕಿನಿಂದ ಹಣವನ್ನು ದುರುಪಯೋಗಪಡಿಸಿದೆ ಎಂದು ಆರೋಪಿಸಿ ಅಲಹಾಬಾದ್ ಬ್ಯಾಂಕ್ ಆರ್‌ಬಿಐಗೆ ವರದಿ ನೀಡಿತ್ತು.

Leave A Reply

Your email address will not be published.