ಎಟಿಎಂ ಕಾರ್ಡ್ ಕಳೆದುಕೊಂಡ ಸಂದರ್ಭದಲ್ಲಿ ಮನೆಯಲ್ಲೇ ಕುಳಿತು ಹೀಗೆ ಬ್ಲಾಕ್ ಮಾಡಿ

4,600

ಸಾಮಾನ್ಯವಾಗಿ ಎಲ್ಲರೂ ಎಟಿಎಂ ಕಾರ್ಡ್ ಬಳಸ್ತಾರೆ. ಪ್ರತಿ ಬಾರಿ ಬ್ಯಾಂಕ್ ಗೆ ಹೋಗಿ ಹಣ ಡ್ರಾ ಮಾಡುವುದು ಕಿರಿಕಿರಿ. ಈ ಕೆಲಸವನ್ನು ಎಟಿಎಂ ಸುಲಭ ಮಾಡಿದೆ. ಎಟಿಎಂ ಕಾರ್ಡ್ ಹೊಂದಿರುವವರು ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.

ಸಣ್ಣ ನಿರ್ಲಕ್ಷ್ಯ ಎಟಿಎಂ ಕಾರ್ಡ್ ಕಳೆಯಲು ಕಾರಣವಾಗುತ್ತದೆ. ಎಟಿಎಂ ಕಾರ್ಡ್ ಕಳೆಯುತ್ತಿದ್ದಂತೆ ಬಹುತೇಕರು ಬ್ಯಾಂಕ್ ಗೆ ಹೋಗಿ ಕಾರ್ಡ್ ಬ್ಲಾಕ್ ಮಾಡಿಸ್ತಾರೆ. ಆದ್ರೆ ಕಾರ್ಡ್ ಬ್ಲಾಕ್ ಮಾಡಲು ಬ್ಯಾಂಕ್ ಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕಾರ್ಡ್ ಬ್ಲಾಕ್ ಮಾಡಬಹುದು.

ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುವವರು ಎಟಿಎಂ ಕಾರ್ಡ್ ಬ್ಲಾಕ್ ಮಾಡಬಹುದು. ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವವರು ಮೊದಲು ಐಡಿ, ಪಾಸ್ವರ್ಡ್ ಹಾಕಿ ಲಾಗಿನ್ ಆಗಿ. ನಂತ್ರ ಎಟಿಎಂ ಸರ್ವಿಸ್ ಗೆ ಹೋಗಿ ಬ್ಲಾಕ್ ಎಟಿಎಂ ಕಾರ್ಡ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಎಟಿಎಂ ಕಾರ್ಡ್ ಕಾಣಲಿದೆ. ಅಲ್ಲಿ ನಿಮ್ಮ ಎಟಿಎಂ ಕಾರ್ಡ್ ಗೆ ಸಂಬಂಧಿಸಿದ ಕೆಲವೊಂದು ಮಾಹಿತಿಯನ್ನು ನೀಡಬೇಕಾಗುತ್ತದೆ.

ಪ್ರಶ್ನೆಗಳಿಗೆ ಉತ್ತರ ನೀಡಿದ ನಂತ್ರ ಸಬ್ಮಿಟ್ ಬಟನ್ ಒತ್ತಿ. ನಂತ್ರ ನೋಂದಾಯಿತ ಮೊಬೈಲ್ ನಂಬರ್ ಗೆ ಮೆಸ್ಸೇಜ್ ಬರಲಿದೆ. ಫೋನ್ ಗೆ ಬರುವ ಒಟಿಪಿಯನ್ನು ಹಾಕಿದ್ರೆ ಎಟಿಎಂ ಕಾರ್ಡ್ ಬ್ಲಾಕ್ ಆಗಲಿದೆ. ಬ್ಯಾಂಕ್ ಗೆ ಇ-ಮೇಲ್ ಕಳುಹಿಸಿ ಕೂಡ ಎಟಿಎಂ ಕಾರ್ಡ್ ಬ್ಲಾಕ್ ಮಾಡಬಹುದು.

Leave A Reply

Your email address will not be published.