ಬಿಗ್ ನ್ಯೂಸ್: ಅಧಿಕಾರಾವಧಿ ಮುಗಿಯುವ ಮುನ್ನವೇ ರಾಜೀನಾಮೆ ನೀಡಿದ ಆರ್.ಬಿ.ಐ. ಡೆಪ್ಯುಟಿ ಗವರ್ನರ್

5,919

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿರಳ್ ಆಚಾರ್ಯ ಅವರ ಅಧಿಕಾರಾವಧಿ ಇನ್ನೂ ಆರು ತಿಂಗಳ ಕಾಲ ಇದ್ದು, ಆದರೆ ಅವಧಿಗೂ ಮುನ್ನವೇ ಅವರು ರಾಜೀನಾಮೆ ನೀಡಿದ್ದಾರೆ.

2017 ರ ಜನವರಿ 23 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ಆಗಿ ನೇಮಕಗೊಂಡಿದ್ದ ವಿರಳ್ ಆಚಾರ್ಯ, ಈ ಸ್ಥಾನಕ್ಕೆ ನೇಮಕಗೊಂಡಿದ್ದ ಅತಿ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಕಳೆದ ವರ್ಷದ ಡಿಸೆಂಬರ್ ನಲ್ಲಿ ಆರ್.ಬಿ.ಐ. ಗವರ್ನರ್ ಉರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅವರು ಕೂಡ ತಮ್ಮ ಅಧಿಕಾರವಧಿ ಮುಗಿಯುವ 9 ತಿಂಗಳ ಮುನ್ನವೇ ಸ್ಥಾನ ತೊರೆದಿದ್ದರು. ಇದರಿಂದಾಗಿ ಒಟ್ಟು ಆರು ತಿಂಗಳ ಅವಧಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇಬ್ಬರು ಪ್ರಮುಖ ಅಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಂತಾಗಿದೆ.

Leave A Reply

Your email address will not be published.