ಅಚ್ಚರಿ ಮೂಡಿಸಿದ ಕಿಮ್ – ಟ್ರಂಪ್ ಪತ್ರ ವ್ಯವಹಾರ

4,660

ವಾಷಿಂಗ್ಟನ್, ಜೂನ್ 24: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಗತ್ರ ಬರೆದಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ.

2018 ರ ಜೂನ್ ತಿಂಗಳಿನಲ್ಲಿ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ಭೇಟಿಯಾಗಿ ಉಭಯ ದೇಶಗಳ ನಡುವಿನ ಪರಸ್ಪರ ಹಗೆತನವನ್ನು ಶಮನಗೊಳಿಸಲು ಪ್ರಯತ್ನಿಸಿದ್ದರು.

ಜೂನ್ ನಲ್ಲಿ ಉಭಯ ನಾಯಕರ ಭೇಟಿಯ ನಂತರ ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಉನ್ ಒಪ್ಪಿಗೆ ಸೂಚಿಸಿದ್ದರು.

ಮತ್ತೊಮ್ಮೆ ದಿಗ್ಗಜರ ಭೇಟಿ? ಟ್ರಂಪ್ ಗೆ ಕಿಮ್ ಹೊಸ ಪತ್ರ

ಜೂನ್ ತಿಂಗಳ ಆರಂಭದಲ್ಲಿ ಟ್ರಂಪ್ ಗೆ ಕಿಮ್ ಜಾಂಗ್ ಪತ್ರ ಬರೆದಿದ್ದರು. “ಸುಂದರವಾದ ಪತ್ರ” ಎಂದು ಅನ್ನು ಶ್ಲಾಘಿಸಿದ್ದ ಟ್ರಂಪ್, ಪತ್ರದಲ್ಲಿ ಏನಿದೆ ಎಂಬ ಬಗ್ಗೆ ಮಾತ್ರ ಮಾಹಿತಿ ನೀಡಿರಲಿಲ್ಲ. ಆದರೆ ಉಭಯ ನಾಯಕರು ಪದೇ ಪದೇ ಪತ್ರ ವ್ಯವಹಾರ ನಡೆಸುತ್ತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಚ್ಚರಿ ಮೂಡಿಸಿದೆ.ಪತ್ರದಲ್ಲೇನಿದೆ? 
ಡೊನಾಲ್ಡ್ ಟ್ರಂಪ್ ಪತ್ರದಲ್ಲೇನಿದೆ?

ಡೊನಾಲ್ಡ್ ಟ್ರಂಪ್ ಅವರು ಕಿಮ್ ಜಾಂಗ್ ಉನ್ ಗೆ ಬರೆದ ಪತ್ರದಲ್ಲಿ ಉಭಯ ದೇಶಗಳ ನಡುವೆ ಸೌಹಾರ್ದ ಸಂಬಂಧ ಏರ್ಪಡುತ್ತಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ವೈಟ್ ಹೌಸ್ ಮೂಲಗಳು ವರದಿ ಮಾಡಿವೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿಲ್ಲ. ಆದರೆ ಪತ್ರ ವಿನಿಮಯವಾಗಿದ್ದಂತೂ ಸತ್ಯ ಎಂದು ಮೂಲಗಳು ಖಚಿತಪಡಿಸಿವೆ.

ದಿಗ್ಗಜರ ಭೇಟಿ 
ಶತಮಾನದ ಭೇಟಿ

ಕಳೆದ ಜೂನ್ ನಲ್ಲಿ ಎರಡು ಶತ್ರು ರಾಷ್ಟ್ರಗಳ ನಾಯಕರು ಪರಸ್ಪರ ಭೇಟಿಯಾಗಿದ್ದು ಇಡೀ ವಿಶ್ವದ ಗಮನ ಸೆಳೆದಿತ್ತು. ಟ್ರಂಪ್, ಕಿಮ್ ಭೇಟಿಯನ್ನು ಶತಮಾನದ ಭೇಟಿ ಎಂದು ಮಾಧ್ಯಮಗಳು ಬಣ್ಣಿಸಿದ್ದವು. ಇದು ಹೊಸ ಯುಗದ ಸೃಶಃ್ಟಿ ಎಂದೂ ಶ್ಲಾಘಿಸಿದ್ದವು.

ಟ್ರಣಪ್ ಎಚ್ಚರಿಕೆ 
ಎಚ್ಚರಿಕೆ ನೀಡಿದ್ದ ಅಮೆರಿಕ

ದಕ್ಷಿಣಾ ಕೊರಿಯಾ ಜೊತೆ ಜಂಟಿ ಸಮರಾಭ್ಯಾಸ ನಡೆಸುವುದನ್ನು ಸ್ಥಗಿತಗೊಳಿಸಿದ್ದ ಟ್ರಂಪ್, ಉತ್ತರ ಕೊರಿಯಾ ಏನಾದರೂ ಅಣ್ವಸ್ತ್ರ ನಿಷೇಧಕ್ಕೆ ನೀಡಿದ್ದ ಒಪ್ಪಿಗೆಯಿಂದ ಹಿಂದೆ ಸರಿದು, ಮಾತು ತಪ್ಪಿದರೆ ಮತ್ತೆ ಸಮರಾಭ್ಯಾಸ ಉಂದುವರಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದರು.

ಪುಟಿನ್ ಆಮಂತ್ರಣ 
ರಷ್ಯಾದಿಂದಲೂ ಆಮಂತ್ರಣ

ಟ್ರಂಪ್-ಕಿಮ್ ಭೇಟಿಯ ಯಶಸ್ಸಿನ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟನ್ ಅವರು ಕಿಮ್ ಜಾಂಗ್ ಉನ್ ಅವರನ್ನು ರಷ್ಯಾಕ್ಕೆ ಬರುವಂತೆ ಆಮಂತ್ರಿಸಿದ್ದರು. ಆದರೆ ಇದುವರೆಗೆ ಅವರು ರಷ್ಯಾಕ್ಕೆ ತೆರಳುವ ಬಗ್ಗೆ ಯಾವುದೇ ವಿಚಾರ ಮಾತನಾಡಿಲ್ಲ.

Leave A Reply

Your email address will not be published.