ಮಾರ್ಕ್ ಎಸ್ಪೆರ್ ಅಮೆರಿಕದ ನೂತನ ರಕ್ಷಣಾ ಸಚಿವ

5,909

ವಾಷಿಂಗ್ಟನ್, ಜೂ.22-ಹಿರಿಯ ಸೇನಾಧಿಕಾರಿ ಮಾರ್ಕ್ ಎಸ್ಪೆರ್ ಅವರನ್ನು ಅಮೆರಿಕದ ಮುಂದಿನ ರಕ್ಷಣಾ ಸಚಿವರನ್ನಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ.

ಇರಾನ್ ಜೊತೆ ಸಂಘರ್ಷ ಉಲ್ಬಣಗೊಂಡು ರಕ್ಷಣಾ ಸಚಿವಾಲಯ-ಪೆಂಟಗನ್‍ಗೆ ಸಮರ್ಥ ನಾಯಕರ ಕೊರತೆ ಎದುರಾಗಿದ್ದ ಸಂದರ್ಭದಲ್ಲೇ ಅದ್ಯಕ್ಷರು ಈ ನೇಮಕ ಮಾಡಿದ್ದಾರೆ.

ಕಳೆದ ವರ್ಷಾಂತ್ಯದಲ್ಲಿ ಟ್ರಂಪ್ ಜೊತೆ ಭಿನ್ನಾಭಿಪ್ರಾಯದಿಂದ ಜಿಮ್ ಮ್ಯಾಟಿಸ್ ರಕ್ಷಣಾ ಕಾರ್ಯದರ್ಶಿ(ಸಚಿವ) ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗಿನಿಂದಲೂ ಪೆಂಟಗನ್‍ನಲ್ಲಿ ರಕ್ಷಣಾ ಇಲಾಖೆ ಮಂತ್ರಿ ಕೊರತೆ ಇತ್ತು.

ಈ ಮಹತ್ವದ ಹುದ್ದೆಗೆ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡುವಂತೆ ಸಂಸದರು ಟ್ರಂಪ್ ಮೇಲೆ ಒತ್ತಡ ಹೇರಿದ್ದರು. ಅಮೆರಿಕ ಸೆನೆಟ್ ಮಾರ್ಕ್ ಅವರ ನೇಮಕವನ್ನು ಖಚಿತಪಡಿಸಿದ ನಂತರ ಅವರು ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿ ಪದಗ್ರಹಣ ಮಾಡಲಿದ್ದಾರೆ.

Leave A Reply

Your email address will not be published.