ಮುಂದಿನ 3 ಪಂದ್ಯಗಳಿಗೆ ವೇಗಿ ಭುವನೇಶ್ವರ್ ಕುಮಾರ್ ಅಲಭ್ಯ

5,734

ಮ್ಯಾಂಚೆಸ್ಟರ್, ಜೂ.17- ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ಭಾರತದ ವೇಗಿ ಭುವನೇಶ್ವರ್‍ಕುಮಾರ್ ಅವರು ಮುಂದಿನ 3 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಗೆಲುವಿನ ಅಲೆಯಲ್ಲಿ ತೇಲುತ್ತಿರುವ ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ ಕಾಡುತ್ತಿದ್ದು ಆಸ್ಟ್ರೇಲಿಯಾದ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಶಿಖರ್‍ಧವನ್ ಗಾಯಗೊಂಡು ಹೊರಗುಳಿದಿದ್ದರೆ, ನಿನ್ನೆ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವೇಗಿ ಭುವನೇಶ್ವರ್‍ಕುಮಾರ್ ಗಾಯಗೊಂಡಿದ್ದಾರೆ.

ಭುವನೇಶ್ವರ್‍ಕುಮಾರ್‍ಗೆ ಆಗಿರುವ ಗಾಯದ ಪ್ರಮಾಣ ಹೆಚ್ಚಾಗಿದ್ದರಿಂದ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿರುವುದರಿಂದ 2 ರಿಂದ 3 ಪಂದ್ಯಗಳಿಂದ ತಂಡದಿಂದ ಹೊರಗುಳಿಯಲಿದ್ದಾರೆ.

ಭುವಿ ಬದಲು ಸಮಿ: 
ಪಾಕಿಸ್ತಾನ ವಿರುದ್ಧದ ಭುವಿ ಮಾಡಿದ 3ನೆ ಓವರ್‍ನಲ್ಲಿ ಮಂಡಿರಜ್ಜಿಗೆ ಒಳಗಾಗಿರುವ ಭುವನೇಶ್ವರ್ ಬದಲು ಮತ್ತೊಬ್ಬ ವೇಗಿ ಮೊಹಮ್ಮದ್ ಸೆಮಿ ಆಡುವ 11ರ ಬಳಗದಲ್ಲಿ ಸ್ಥಾನವನ್ನು ಪಡೆಯಲಿದ್ದಾರೆ.

ಪಾಕಿಸ್ತಾನ ವಿರುದ್ಧ ಅಭೂತಪೂರ್ವ ಜಯ ಸಾಧಿಸಿರುವ ವಿರಾಟ್ ಕೊಹ್ಲಿ ಪಡೆಯು ಜೂನ್ 22 ರಂದು ಸೌಂತ್‍ಆಪ್ಟನ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಫ್ಘಾನಿಸ್ತಾನದ ಸವಾಲನ್ನು ಎದುರಿಸಲಿದೆ.

Leave A Reply

Your email address will not be published.