ಪಾಕ್‌ನ ಅಪ್ರಚೋದಿತ ದಾಳಿಗೆ ಭಾರತದ ಯೋಧ ಬಲಿ

5,174

ಜಮ್ಮು, ಜೂ.11: ಪೂಂಚ್ ಸೆಕ್ಟರ್‌ನಲ್ಲಿ ಸೋಮವಾರ ಸಂಜೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಸೇನೆ ನಡೆಸಿದ್ದ ಅಪ್ರಚೋದಿತ ದಾಳಿಗೆ ಗಂಭೀರ ಗಾಯಗೊಂಡಿದ್ದ ಭಾರತದ ಯೋಧನೊಬ್ಬ ಇಂದು ಕೊನೆಯುಸಿರೆಳೆದಿದ್ದಾರೆ.

ಹುತಾತ್ಮ ಯೋಧನನ್ನು 28ರ ಹರೆಯದ ಲ್ಯಾನ್ಸ್ ನಾಕ್ ಮುಹಮ್ಮದ್ ಜಾವೇದ್ ಎಂದು ಗುರುತಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

”ಲ್ಯಾನ್ಸ್ ನಾಕ್ ಮುಹಮ್ಮದ್ ಜಾವೇದ್ ಓರ್ವ ಧೈರ್ಯಶಾಲಿ ಹಾಗೂ ಪ್ರಾಮಾಣಿಕ ಯೋಧ. ಅವರ ಅಮೂಲ್ಯ ತ್ಯಾಗ, ಕರ್ತವ್ಯ ನಿಷ್ಠೆಗೆ ದೇಶ ಸದಾ ಋಣಿಯಾಗಿದೆ” ಎಂದು ಸಚಿವಾಲಯದ ವಕ್ತಾರರು ತಿಳಇಸಿದ್ದಾರೆ. ಇದೇ ವೇಳೆ ,ಉತ್ತರ ಕಮಾಂಡರ್ ಲೆ.ಜನರಲ್ ರಣಬೀರ್ ಸಿಂಗ್ ಹಾಗೂ ಇತರ ರ್ಯಾಂಕಿನ ಅಧಿಕಾರಿಗಳು ಯೋಧನ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ್ದಾರೆ.

Leave A Reply

Your email address will not be published.