ಆಫ್ಘನ್‍ನಲ್ಲಿ ಅಮೆರಿಕ ನಡೆಸಿದ ಬಾಂಬ್ ದಾಳಿಯಲ್ಲಿ ಕಾಸರಗೋಡು ಮೂಲದ ಐಸಿಸ್ ನಾಯಕ ಹತ..!

4,390

ಕಾಬೂಲ್/ಕೋಳಿಕೋಡ್, ಜೂ.3-ಕುಪ್ರಸಿದ್ಧ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರಗಾಮಿ ಸಂಘಟನೆಯ ಕೇರಳ ಘಟಕದ ನಾಯಕ ಹಾಗೂ ಕರ್ನಾಟಕ-ಕೇರಳ ಗಡಿ ಭಾಗದ ಕಾಸರಗೋಡು ನಿವಾಸಿ ರಷೀದ್ ಅಬ್ದುಲ್ಲಾ ಆಫ್ಘಾನಿಸ್ತಾನದಲ್ಲಿ ಅಮೆರಿಕ ಸೇನಾಪಡೆಗಳು ನಡೆಸಿದ ಬಾಂಬ್ ದಾಳಿಯಲ್ಲಿ ಹತನಾಗಿದ್ದಾನೆ. 
ಈ ಘಟನೆಯಲ್ಲಿ ನಾಲ್ವರು ಮಕ್ಕಳು, ಇಬ್ಬರು ಮಹಿಳೆಯರೂ ಸೇರಿದಂತೆ ಒಂಭತ್ತು ಮಂದಿ ಮೃತಪಟ್ಟಿದ್ದಾರೆ.

ಆಫ್ಘಾನಿಸ್ತಾನದ ಖೋರಸಾನ್ ಪ್ರಾಂತ್ಯದಿಂದ ಅಪರಿಚಿತ ಐಎಸ್ ಉಗ್ರಗಾಮಿಯೊಬ್ಬ ಟೆಲಿಗ್ರಾಂ ಆಯಪ್ ಮೂಲಕ ರವಾನಿಸಿದ ಸಂದೇಶವೊಂದರಲ್ಲಿ ಈ ವಿಷಯ ತಿಳಿಸಲಾಗಿದೆ. ಅಮೆರಿಕ ಸೇನಾಪಡೆಗಳು ಭಾರೀ ಭಾಂಬ್ ದಾಳಿಗಳನ್ನು ನಡೆಸಿತು. ರಷೀದ್ ಅಬ್ದುಲ್ಲಾ, ಭಾರತದ ನಮ್ಮ ಮೂವರು ಸಹೋದರರು, ಇಬ್ಬರು ಭಾರತೀಯ ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸಹ ಈ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಹೇಳಲಾದ ಸಂದೇಶ ಮಾಧ್ಯಮಗಳಿಗೆ ಲಭಿಸಿದೆ.

ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನೆ ಸಂಘಟನೆಯ ಕೇರಳ ಘಟಕದ ನಾಯಕನಾಗಿದ್ದ ರಷೀದ್ ಐಎಸ್ ತತ್ತ್ವ ಮತ್ತು ಸಿದ್ಧಾಂತಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಈತ ಕರ್ನಾಟಕ-ಕೇರಳ ಗಡಿಯ ಕಾಸರಗೋಡು ಜಿಲ್ಲೆಗೆ ಸೇರಿದವನು.

ಟೆಲಿಗ್ರಾಂ ಆಯಪ್ ಮೂಲಕ ಸಂಬಂಧಪಟ್ಟವರಿಗೆ ಈ ಮಾಹಿತಿ ರವಾನಿಸಿರುವ ಅಪರಿಚಿತ ಐಎಸ್ ಉಗ್ರನೊಬ್ಬ. ಅಬ್ದುಲ್ಲಾ ಕಳೆದ ಎರಡು ತಿಂಗಳಿನಿಂದ ಮೌನವಾಗಿದ್ದ. ಈಗ ಆತ ಬದುಕಿಲ್ಲ. ಅಮೆರಿಕ ಸೇನಾಪಡೆಗಳ ದಾಳಿಯಲ್ಲಿ ಹತನಾಗಿದ್ದಾನೆ ಎಂದು ಮಾಹಿತಿ ನೀಡಿದ್ಧಾನೆ.

ಕೇರಳದಿಂದ ಆಫ್ಘಾನಿಸ್ತಾನಕ್ಕೆ ತೆರಳಿದ್ದ 21 ಮಂದಿಗೆ ಈತ ನಾಯಕನಾಗಿದ್ದ. 2016ರ ಮೇ-ಜೂನ್‍ನಲ್ಲಿ ಅಬ್ದುಲ್ಲಾ ಮತ್ತಿತರರು ಆಫ್ಘನ್‍ಗೆ ತೆರಳಿದ್ದರು. ಈ ತಂಡದಲ್ಲಿ ಆತನ ಪತ್ನಿ ಆಯೇಷಾ ಅಲಿಯಾಸ್ ಸೋನಿಯಾ ಕೂಡ ಇದ್ದಳು. ಈ ತಂಡವು ಯುಎಇ ಮತ್ತು ಟೆಹರಾನ್ ಮೂಲಕ ಅಫ್ಘಾನಿಸ್ತಾನ ತಲುಪಿತ್ತು .

ಇಸ್ಲಾಂ ಧರ್ಮ ಪ್ರಚಾರಕ ಎಂ.ಎಂ.ಅಕ್ಬರ್ ಸ್ಥಾಪಿಸಿದ್ದ ಪೀಸ್ ಇಂಟರ್‍ನ್ಯಾಷನಲ್ ಸ್ಕೂಲ್‍ನಲ್ಲಿ ಶಿಕ್ಷಕನಾಗಿದ್ದ ರಷೀದ್ ಅಬ್ದುಲ್ಲಾ, ಎಂಜಿನಿಯರಿಂಗ್ ಪದವೀಧರನಾಗಿದ್ದ ಈತ 2014ರಲ್ಲಿ ಐಎಸ್ ಸಿದ್ಧಾಂತಗಳತ್ತ ಆಕರ್ಷಿತನಾಗಿದ್ದ.

ಶಾಲೆಯ ಒಂದು ವಿಭಾಗಕ್ಕೆ ಮುಖ್ಯಸ್ಥನಾಗಿದ್ದ ಆತನ ಇಂಟರ್‍ನೆಟ್‍ನಲ್ಲಿ ಐಎಸ್ ಪ್ರಚಾರದಿಂದ ಪ್ರಭಾವಿತನಾಗಿದ್ದ. ನಂತರ ಐಎಸ್ ಜೊತ ಸಂಪರ್ಕ ಸಾಧಿಸಿ ಆಫ್ಘಾನಿಸ್ತಾನಕ್ಕೆ ತೆರಳಿದ. ಅಲ್ಲಿ ಕೋಳಿಕೋಡ್‍ನ ಮತ್ತೊಬ್ಬ ಎಂಜಿನಿಯರಿಂಗ್ ಪದವೀಧರ ಶಜೀರ್ ಮಂಗಲಸ್ಸರಿ ಎಂಬಾತನನ್ನು ಐಎಸ್ ವಿರೋಧ ಎಂಬ ಕಾರಣಕ್ಕಾಗಿ ಕೊಂದು ಹಾಕಿ ಕೇರಳ ಘಟಕದ ನಾಯಕನಾಗಿದ್ದ.

Leave A Reply

Your email address will not be published.