ರಶ್ಯದಿಂದ ಎಸ್‌-400 ಕ್ಷಿಪಣಿ ಖರೀದಿಸಿದರೆ ಜೋಕೆ, ಭಾರತಕ್ಕೆ ಅಮೆರಿಕ ಎಚ್ಚರಿಕೆ

5,786

ವಾಷಿಂಗ್ಟನ್‌ : ಭಾರತ ಒಂದೊಮ್ಮೆ ರಶ್ಯದಿಂದ ದೀರ್ಘ‌ ವ್ಯಾಪ್ತಿಯ ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಮುಂದಾದಲ್ಲಿ ಅದರಿಂದ ಭಾರತ-ಅಮೆರಿಕ ರಕ್ಷಣಾ ಬಾಂಧವ್ಯಗಳ ಮೇಲೆ ಗಂಭೀರ ವ್ಯತಿರಿಕ್ತ ಪರಿಣಾಮ ಉಂಟಾದೀತು ಎಂದು ಟ್ರಂಪ್‌ ಆಡಳಿತೆ ಎಚ್ಚರಿಕೆ ನೀಡಿದೆ.

ಎಸ್‌ 400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ರಶ್ಯದ ಅತ್ಯಾಧುನಿಕ, ನೆಲದಿಂದ ಆಗಸಕ್ಕೆ ಹಾರಿಸುವ ದೀರ್ಘ‌ ವ್ಯಾಪ್ತಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ.

ಇದನ್ನು ಮೊತ್ತ ಮೊದಲಾಗಿ 2014ರಲ್ಲಿ ಚೀನ ಉಭಯ ಸರಕಾರಗಳ ನಡುವಿನ ನೇರ ವಹಿವಾಟಿನಲ್ಲಿ ರಶ್ಯದಿಂದ ಖರೀದಿಸಿತ್ತು.

ಭಾರತ ಮತ್ತು ರಶ್ಯ 5 ಬಿಲಿಯ ಡಾಲರ್‌ಗಳ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಯ ಖರೀದಿ ವಹಿವಾಟಿಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಹಿ ಹಾಕಿತ್ತು.

Leave A Reply

Your email address will not be published.