ಟ್ರಂಪ್ ಜೊತೆಗಿನ ಮಾತುಕತೆ ವಿಫಲ: ರಾಯಭಾರಿಯನ್ನು ಗಲ್ಲಿಗೇರಿಸಿದ ಉ.ಕೊರಿಯಾ!

5,180

ಸಿಯೋಲ್(ಮೇ.31): ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಂದಿಗಿನ ಎರಡನೇ ಶೃಂಗಸಭೆ ವಿಫಲಗೊಂಡ ಹಿನ್ನೆಲೆಯಲ್ಲಿ, ಉ.ಕೊರಿಯಾ ತನ್ನ ವಿಶೇಷ ರಾಯಭಾರಿಯನ್ನು ಗಲ್ಲಿಗೇರಿಸಿದೆ ಎಂದು ದ.ಕೊರೊಯಾದ ಪತ್ರಿಕೆಗಳು ವರದಿ ಮಾಡಿವೆ.

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಉ.ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಊನ್ ನಡುವೆ ಹನೋಯಿಯಲ್ಲಿ ನಡೆದ ಎರಡನೇ ಶೃಂಗಸಭೆ ವಿಫಲವಾಗಿತ್ತು. ಈ ಶೃಂಗಸಭೆಯ ಹೊಣೆ ಹೊತ್ತಿದ್ದ ಉ.ಕೊರೊಯಾದ ಅಮೆರಿಕದ ವಿಶೇಷ ರಾಯಭಾರಿ ಕಿಮ್ ಹ್ಯಾಕ್ ಚೌಲ್ ಅವರನ್ನು ಗಲ್ಲಿಗೇರಿಸಲಾಗಿದೆ ಎನ್ನಲಾಗಿದೆ.

ಶೃಂಗಸಭೆ ಕುರಿತು ಉ.ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಊನ್ ಅವರಿಗೆ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಕಿಮ್ ಹ್ಯಾಕ್ ಚೌಲ್ ಅವರನ್ನು ಗಲ್ಲಿಗೇರಿಸಲಾಗಿದೆ ಎಂದು ದ.ಕೊರೊಯಾ ಪತ್ರಿಕೆಗಳು ತಿಳಿಸಿವೆ.

ಅಲ್ಲದೇ ಕಿಮ್ ಹ್ಯಾಕ್ ಚೌಲ್ ಜೊತೆಗೆ ವಿದೇಶಾಂಗ ಇಲಾಖೆಯ ಇತರ ನಾಲ್ವರು ಅಧಿಕಾರಿಗಳನ್ನೂ ಗುಂಡಿಟ್ಟು ಸಾಯಿಸಲಾಗಿದೆ ಎಂದು ಹೇಳಲಾಗಿದ್ದು, ಹತ ಅಧಿಕಾರಿಗಳ ಮಾಹಿತಿ ಬಹಿರಂಗಪಡಿಸಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿವೆ. 

Leave A Reply

Your email address will not be published.