ಸಾವಿನ ಕಣಿವೆ ಎಂಬ ವಿಶ್ವ ಪ್ರಸಿದ್ಧ ಸ್ಥಳ

7,908


ಕುಬೆಟಾವೋ ಬ್ರೆಜಿಲ್ ದೇಶದ ಒಂದು ಪಟ್ಟಣ. ಇದಕ್ಕಿರುವ ಅಡ್ಡಹೆಸರೇ ‘ಸಾವಿನ ಕಣಿವೆ’! (ದಿ ವ್ಯಾಲಿ ಆಫ್ ಡೆತ್). ಇದಕ್ಕೆ ಕಾರಣ ಈ ಪಟ್ಟಣ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ‘ಮಾಲಿನ್ಯ ನಗರ’ವಾಗಿರುವುದು. ಈ ನಗರದ ಹೊರವಲಯವನ್ನು ಅಣ್ವಸ್ತ್ರಗಳ ಸ್ಫೋಟಕ ವಲಯವಾಗಿ ಬಳಸಲಾಗುತ್ತಿದೆ. ಪರಿಣಾಮವಾಗಿ ಸುತ್ತಲಿನ ಅರಣ್ಯದಲ್ಲಿ ಸಸ್ಯವರ್ಗ ನಿರ್ನಾಮವಾಗಿ ಹೋಗಿದೆ. ಈ ಪರಮಾಣು ಸ್ಫೋಟಗಳಿಂದ ಇಲ್ಲಿಯ ನೀರು, ಗಾಳಿ ಮತ್ತು ಭೂಮಿ ವಿಷಮಯವಾಗಿದೆ.

1984ರಲ್ಲಿ ಇಲ್ಲಿ ತೈಲಾಗಾರಗಳು ಸ್ಫೋಟಿಸಿ ಅಪಾರ ಪ್ರಮಾಣದ ತೈಲವು ಭೂಮಿಯಲ್ಲಿ ಸೋರಿ ಹೋಯಿತು. ಇದು ನಡೆದದ್ದು 2009ರಲ್ಲಿ. ಇದನ್ನು ಶುಚಿಗೊಳಿಸಲು ಸುಮಾರು 24 ಕೈಗಾರಿಕೆಗಳು ಆಹೋರಾತ್ರಿ ಶ್ರಮಿಸಿದವು. ಇದಕ್ಕೆ ಅಮೆರಿಕ 120 ಶತಕೋಟಿ ಡಾಲರ್ ನೆರವು ನೀಡಿತು. ಆದರೆ ಇಂದಿಗೂ ಈ ಶುಚಿತ್ವದ ಕೆಲಸ ಇಲ್ಲಿ ನಡೆಯುತ್ತಲೇ ಇದೆ. ಈ ನಗರದ ಇನ್ನೊಂದು ದುರದೃಷ್ಟದ ಸಂಗತಿ ಎಂದರೆ ಇಲ್ಲಿ ಹುಟ್ಟುತ್ತಿರುವ ಮೆದುಳಿಲ್ಲದ ಮಕ್ಕಳು! ಇಲ್ಲಿ ಇತ್ತೀಚೆಗೆ ಜನಿಸುತ್ತಿರುವ ಬಹಳಷ್ಟು ಮಕ್ಕಳು ‘ಅನೆನ್ಸಫೆಲಿ’ ಎಂಬ ಭೀಕರ ರೋಗಕ್ಕೆ ತುತ್ತಾಗಿ ಜನಿಸುತ್ತಿವೆ. ಅಂದರೆ ಮಕ್ಕಳು ಜನಿಸುವಾಗಲೇ ಅವುಗಳ ಮೆದುಳು, ತಲೆಬುರುಡೆ ಮತ್ತು ನೆತ್ತಿಯ ಭಾಗಗಳು ಕೇವಲ ಅರ್ಧಭಾಗ ಮಾತ್ರ ಇವೆ. ಹೀಗೆ ಹುಟ್ಟಿದ ಮಕ್ಕಳು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಇಹಲೋಕ ತ್ಯಜಿಸುತ್ತಿವೆ. ಇಂತಹ ಅತ್ಯಂತ ಭಯಾನಕ ಮಲಿನಕಾರಿ ಪಟ್ಟಣದಲ್ಲಿ ಇನ್ನೂ 1.10 ಲಕ್ಷ ಜನ ಬಾಳುತ್ತಿರುವುದೇ ಪರಮಾದ್ಭುತ!

ರಮ್ಯ .ಎ.ಎಸ್.

ಸಮಗ್ರಾಭವೃದ್ಧಿ ನ್ಯೂಸ್ ಡೆಸ್ಕ್

Leave A Reply

Your email address will not be published.