ಸಾಫ್ಟ್‌ವೇರ್ ಉದ್ಯೋಗಿಗಳು ಓದಲೇಬೇಕಾದ ಶಾಕಿಂಗ್ ನ್ಯೂಸ್ ಇದು!

5,175

ಸರ್ಕಾರಿ ಕೆಲಸವನ್ನು ಒಮ್ಮೆ ಪಡೆದರೆ ಕೊನೆಯವರೆಗೂ ಆ ಕೆಲಸ ಗಟ್ಟಿಯಾಗಿರಬಹುದು. ಆದರೆ, ಐಟಿ ಉದ್ಯೋಗಿಗಳ ಕಥೆ ಹಾಗಿಲ್ಲ. ಒಂದು ಕಾಲದಲ್ಲಿ ಬಹಬೇಡಿಕೆಯಾಗಿದ್ದ ಟೆಕ್ಕಿಗಳು ಇಂದು ನಿರುದ್ಯೋಗಿಗಳಾಗುವ ಸಮಯ ಬಂದಿದೆ.! ಹೊಸ ತಲೆಮಾರಿನ ತಂತ್ರಜ್ಞಾನಕ್ಕೆ ಅಪ್‌ಡೇಟ್‌ ಆಗದೇ ಇರುವ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡುವುದು ಹೆಚ್ಚಾಗುತ್ತಿದೆ.

ಹೌದು, ಹೊಸ ತಂತ್ರಜ್ಞಾನ ಬಳಕೆಗೆ ಪೂರಕವಾದ ಕೌಶಲ ವೃದ್ಧಿಸಿಕೊಳ್ಳುವಲ್ಲಿ ವಿಫಲರಾಗುವ ಟೆಕ್ಕಿಗಳು ಮುಂದಿನ ದಿನಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಟ್ರೆಂಡ್ ಈಗಾಗಲೇ ಅಲ್ಲಲ್ಲಿ ಕಂಡು ಬರುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಕೌಶಲವೃದ್ಧಿಯಲ್ಲಿ ಸೋತ 300 ಉದ್ಯೋಗಿಗಳನ್ನು ಐಬಿಎಂ ಇತ್ತೀಚೆಗೆ ವಜಾಮಾಡಲು ತೀರ್ಮಾನ ಕೈಗೊಂಡಿದೆ.

ಈ ಮೊದಲು ಜಾವಾ ಮತ್ತು ಡಾಟ್‌ನೆಟ್‌ ಗೊತ್ತಿದ್ದರೆ ಐಟಿ ಕಂಪನಿಗಳು ಕರೆದು ಕೆಲಸ ಕೊಡುತ್ತಿದ್ದವು. ಆದರೆ, ಈ ಕೌಶಲಗಳು ದೀರ್ಘಕಾಲಕ್ಕೆ ಸಾಕಾಗುವುದಿಲ್ಲ. ಮುಂದಿನ ದಿನಗಳಲ್ಲಿ ಇವು ಮಾರುಕಟ್ಟೆಯಲ್ಲಿ ಅಷ್ಟೇನೂ ಪ್ರಯೋಜನಕ್ಕೆ ಬರುವುದಿಲ್ಲ. ಹಾಗಾಗಿ, ಹೊಸ ತಲೆಮಾರಿನ ತಂತ್ರಜ್ಞಾನಕ್ಕೆ ಅಪ್‌ಡೇಟ್‌ ಆಗದೇ ಇರುವ ಐಟಿ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲಾಗುತ್ತಿದೆ.

ಇತರೆ ಕಂಪನಿಗಳೂ ಇದೇ ಆಲೋಚನೆಯಲ್ಲಿವೆ ಎಂದು ಉದ್ಯಮದ ತಜ್ಞರು ಎಚ್ಚರಿಸಿದ್ದಾರೆ. ಐಟಿ ಸಂಬಂಧಿ ಉದ್ಯೋಗ ಮಾರುಕಟ್ಟೆಯು ಹೊಸ ತಂತ್ರಜ್ಞಾನ ಕಲಿತವರನ್ನು ಬಯಸುತ್ತಿದೆ. ಹಾಗಾಗಿ, ಉದ್ಯೋಗಿಗಳು ಹೊಸ ತಂತ್ರಜ್ಞಾನಕ್ಕೆ ತ್ವರಿತವಾಗಿ ಹೊಂದಿಕೊಳ್ಳಬೇಕು. ಇಲ್ಲದೇ ಹೋದರೆ ಈಗಿರುವ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪೈಥಾನ್‌, ರೊಬಾಟಿಕ್ ಪ್ರೋಸಸ್ ಆಟೋಮೇಷನ್, ಬಿಗ್‌ ಡೇಟಾ, ಕೃತಕ ಬುದ್ಧಿಮತ್ತೆ(ಎಐ), ಮೆಷಿನ್‌ ಲರ್ನಿಂಗ್, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌(ಆರ್‌ಪಿಎ), ಬ್ಲಾಕ್‌ಚೈನ್, ಅಗ್‌ಮೆಂಟೆಡ್ ರಿಯಾಲಿಟಿ ಮತ್ತು ಯುಐ/ಯುಎಕ್ಸ್‌ ಡಿಜೈನ್ ಸೇರಿದಂತೆ ಮತ್ತಿತರ ಇತ್ತೀಚಿನ ತಂತ್ರಜ್ಞಾನಗಳಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಇದೀಗ ಹೊಸದಾಗಿ ಕೌಶಲ ಸಂಪಾದಿಸುವ ಅಗತ್ಯವಿದೆ.

Leave A Reply

Your email address will not be published.