ಭಾರತಕ್ಕೆ ನೂತನ ಪಾಕ್ ಹೈಕಮಿಷನರ್ ಆಗಿ ಮೊಯಿನ್-ಉಲ್-ಹಕ್ ನೇಮಕ

4,680
ಇಸ್ಲಾಮಾಬಾದ್: ಮಹತ್ವದ ಬೆಳವಣಿಗೆಯಲ್ಲಿ ಪಾಕಿಸ್ತಾನ ಭಾರತಕ್ಕೆ ಹೊಸ ಹೈಕಮಿಷನರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.ಸೋಮವಾರದಂದು ವೃತ್ತಿಪರ ರಾಜತಾಂತ್ರಿಕ ನಿಪುಣ ಮೊಯಿನ್ ಉಲ್ ಹಕ್ ಭಾರತಕ್ಕೆ ಪಾಕಿಸ್ತಾನದ ನೂತನ ಹೈಕಮಿಷನರ್ ಆಗಿ ಆಯ್ಕೆಯಾಗಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತ, ಚೀನಾ ಮತ್ತು ಜಪಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ಸುಮಾರು 24ಕ್ಕೂ ಹೆಚ್ಚು ರಾಯಭಾರಿಗಳ ನೇಮಕ ಆದೇಶಕ್ಕೆ ಅನುಮೋದನೆ ನೀಡಿದ್ದಾರೆ.ಸಧ್ಯ ಹಕ್ ಫ್ರಾನ್ಸ್ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಇದಕ್ಕೆ ಮುನ್ನ ಅವರು ಪಾಕ್ ವಿದೇಶಾಂಗ ವ್ಯವಹಾರಗಳ ಕಛೇರಿಯಲ್ಲಿ ಮುಖ್ಯ ಶಿಷ್ತಾಚಾರ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.ಇದಕ್ಕೆ ಮುನ್ನ ಭಾರತದ ಹೈಕಮಿಷನರ್ ಆಗಿದ್ದ ನೊಹೈಲ್ ಮೆಮಹ್ಮೂದ್ ಅವರನ್ನು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಬಳಿಕ ಭಾರತಕ್ಕೆ ಪಾಕ್ ಹೈಕಮಿಷನರ್ ಹುದ್ದೆ ಖಾಲಿ ಉಳಿದಿತ್ತು.

Leave A Reply

Your email address will not be published.