ವಿಶ್ವಕಪ್ ತಯಾರಿ ಬೆನ್ನಲ್ಲೇ ಅಫ್ಘಾನಿಸ್ತಾನಕ್ಕೆ ಶಾಕ್-ನಿವೃತ್ತಿಗೆ ಮುಂದಾದ ಕೋಚ್!

5,163

ಕಾಬೂಲ್(ಮೇ.20): ವಿಶ್ವಕಪ್ ಟೂರ್ನಿಗೆ ಅಫ್ಘಾನಿಸ್ತಾನ ತಂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈ ಬಾರಿ ಅಫ್ಘಾನಿಸ್ತಾನ ತಂಡಡ ದಿಗ್ಗಜ ತಂಡಗಳಿಗೆ ಶಾಕ್ ನೀಡಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೀಗ ತಯಾರಿ ನಡೆಸುತ್ತಿರರುವ ಅಫ್ಘಾನಿಸ್ತಾನ ತಂಡಕ್ಕೆ ಶಾಕ್ ಎದುರಾಗಿದೆ. ಅಫ್ಘಾನಿಸ್ತಾನ ತಂಡದ ಮುಖ್ಯ ಕೋಚ್ ಫಿಲ್ ಸಿಮೋನ್ಸ್ ರಾಜಿನಾಮೆ ನಿರ್ಧಾರ ಪ್ರಕಟಿಸಿದ್ದಾರೆ.

: ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳಿಗೆ ಎದುರಾಗಲಿದೆ ಶಾಕ್- ಕುಂಬ್ಳೆ ಎಚ್ಚರಿಕೆ!

2017ರ ಡಿಸೆಂಬರ್‌ನಲ್ಲಿ ಕೋಚ್ ಜವಾಬ್ದಾರಿ ವಹಿಸಿಕೊಂಡ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಫಿಲ್ ಸಿಮೋನ್ಸ್ ಇದೀಗ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ರಾಜಿನಾಮೆಗೆ ನೀಡಲಿದ್ದಾರೆ. ಈ ಕುರಿತು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿರುವ ಫಿಲ್ ಸಿಮೋನ್ಸ್, ವಿಶ್ವಕಪ್ ಟೂರ್ನಿ ಬಳಿಕ ಅಫ್ಘಾನ್ ಕೋಚ್ ಆಗಿ ಮುಂದುವರಿಯುತ್ತಿಲ್ಲ ಎಂದು ಹೇಳಿದ್ದಾರೆ.

: ಏಕದಿನ ವಿಶ್ವಕಪ್‌ ಗೀತೆ ‘ಸ್ಟ್ಯಾಂಡ್‌ ಬೈ’ ಬಿಡುಗಡೆ

ಫಿಲ್ ಸಿಮೋನ್ಸ್ ಅವಧಿ 2019ರ ವಿಶ್ವಕಪ್ ಬಳಿಕ ಮುಕ್ತಾಯಗೊಳ್ಳಲಿದೆ. ಮತ್ತೊಂದು ಅವದಿಗೆ ವಿಸ್ತರಿಸಲು ಅಫ್ಘಾನ್ ಕ್ರಿಕೆಟ್ ಮಂಡಳಿ ನಿರ್ಧರಿಸಿತ್ತು. ಆದರೆ ಸಿಮೋನ್ಸ್ ಕೋಚ್ ಆಗಿ ಮುಂದುವರಿಯಲು ನಿರಾಕರಿಸಿದ್ದಾರೆ. 18 ತಿಂಗಳಲ್ಲಿ ಅಫ್ಘಾನ್ ಕ್ರಿಕೆಟ್ ಅಭಿವೃದ್ದಿಗೆ ಪ್ರಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಫಿಲ್ ಹೇಳಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ. 

Leave A Reply

Your email address will not be published.