ಫ್ರಾನ್ಸಿನ ಐಫೆಲ್ ಟವರ್ ನಿರ್ಮಾಣದ ಹಿಂದಿದ್ದ ಇಂಜಿನಿಯರ್ ಯಾರು ? 

6,917

 ಐಫೆಲ್ ಟವರ್ ನಿರ್ಮಾಣದ ಹಿಂದಿದ್ದ ಸಾಹಸಿ ಗುಸ್ತಾವ್ ಐಫೆಲ್

ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿರುವ ಐಫೆಲ್ ಟವರ್ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಇದು ಪ್ಯಾರಿಸ್ ನಗರದ ಸಂಕೇತ. ಪ್ರಪಂಚದ ಅತ್ಯಂತ ಪ್ರಸಿದ್ದ ಕಟ್ಟಡಗಳಲ್ಲಿ ಇದು ಒಂದು.  ಈ ಬೃಹತ್ ಕಟ್ಟಡವನ್ನ ನೋಡೋಕೆ ಅಂತಲೇ ಇಲ್ಲಿಗೆ ಜನರು ಆಗಮಿಸ್ತಾರೆ. ಈ ಐಫಲ್ ಟವರ್ ಬಗ್ಗೆ ಇಲ್ಲಿದೆ ಒಂದು ಸಮಗ್ರ ವರದಿ.  ಪ್ಯಾರೀಸಿನ ಆಕರ್ಷಕ ತಾಣ ಐಪಲ್ ಟವರ್. ವಿಶ್ವದ ಅತಿ ದೊಡ್ಡ ಟವರ್ ಗಳಲ್ಲಿ ಇದು ಕೂಡ ಒಂದು. ಗುಸ್ತಾವ್ ಐಫೆಲ್ ಎಂಬ ವಾಸ್ತುಶಿಲ್ಪಿ ಈ ಗೋಪುರ ನಿರ್ಮಾಣದ ನಿರ್ವಹಣೆ ಹೊತ್ತಿದ್ದರಿಂದ ಆತನ ಹೆಸರನ್ನೇ ಈ ಗೋಪುರಕ್ಕೆ ಇಡಲಾಯ್ತು. 1887 -88 ರಲ್ಲಿ ನಿರ್ಮಿಸಲಾದ ಐಫೆಲ್ ಗೋಪುರ ನಿರ್ಮಾಣಕ್ಕೆ ಉತ್ತಮ ಗುಣ ಮಟ್ಟದ ಕಬ್ಬಿಣವನ್ನ ಬಳಕೆ ಮಾಡಲಾಗಿತ್ತು.

ಇಂದಿಗೆ ಈ ಟವರ್ ನಿರ್ಮಾಣ ಮಾಡಿ ನೂರು ವರ್ಷ ದಾಟಿದರೂ ಇನ್ನೂ ಇದರ ಆಕರ್ಷಣಿ ಕುಂದಿಲ್ಲ ! ಫ್ರಾನ್ಸ್ ರಾಜಧಾನಿಯಾದ ಪ್ಯಾರಿಸ್ ಗೆ ಹೋದೋಡನೆ ಎಲ್ಲಿದ್ದರೂ ಈ ಟವರ್ ಕಣ್ಣಿಗೆ ಕಾಣುತ್ತದೆ.  ಅಷ್ಟು ಎತ್ತರ  ಗೋಪುರವಿದು. 898 ಅಡಿಗೂ ಎತ್ತರದಲ್ಲಿ ಈ ಟವರ್ ನಿರ್ಮಿಸಲಾಗಿದೆ. 1889 ರ ಮಾರ್ಚ್ ತಿಂಗಳಲ್ಲಿ ಅಲೆಕ್ಸಾಂಡರ್ ಗಸ್ಟಾವ್ ಐಫೆಲ್ ಇದನ್ನು ಕಟ್ಟಿ ಪೂರ್ಣಗೊಳಿಸಿದರು. ಈ ಐಫೆಲ್ ಟವರ್ ಅನ್ನ ಇದು ಪರಿಪೂರ್ಣ ಕಬ್ಬಿಣದಿಂದ ಕಟ್ಟಲಾಗಿದೆ. ಆ ಕಾಲದಲ್ಲಿ ಕಬ್ಬಿಣ ಉತ್ಪಾಧನೆ ಅಷ್ಟು ಹೇರಳವಾಗಿರಲಿಲ್ಲ. ಅಂದಿನ ಕಾಲದಲ್ಲಿ ನಿಜಕ್ಕೂ ಕಬ್ಬಿಣದಿಂದ ಇಂತಹ  ಟವರ್ ನಿರ್ಮಾಣವನ್ನು ರಚಿಸುವುದಿರಲಿ , ಸೇತುವೆಗಳನ್ನು ಕಟ್ಟುವುದೂ ಕಷ್ಠ ಎಂದು ಮೇಧಾವಿಗಳೇ ಅಂದು ಕೊಳ್ಳುತ್ತಿದ್ದರು. ಇಂತಹ ಪ್ರತಿರೋಧ ಮಾತುಗಳಿಗೆಲ್ಲಾ ಕಿವಿಕೊಡದೆ ಐಫೆಲ್ ಇದನ್ನು ಕಬ್ಬಿಣದಿಂದಲೇ ಕಟ್ಟಿದರು ಅನ್ನೋದು ಇತಿಹಾಸ.

ಗುಸ್ತಾವ್ ಐಫೆಲ್ ಅವರ ಈ ಸಾಹಸ ಇಂದಿಗೂ ಈ ಟವರ್ ಮೂಲಕ ಇಲ್ಲಿನ ಜನರನನ್ನ ಆಕರ್ಷಣೆ ಮಾಡಿದೆ. ಈತನೇ ಪ್ರಥಮವಾಗಿ ರೈಲ್ವೆ ಸೇತುವೆಗಳನ್ನು ಕಬ್ಬಿಣದಿದಂದ ಕಟ್ಟುವುದನ್ನು ತೋರಿಸಿಕೊಟ್ಟ . ಈತ ಅಂದಿನ ಕಾಲಕ್ಕೆ ಅತಿ ಮೇಧಾವಿ ಎಂಜೀನಿಯರ್ ಎಂಬ ಪ್ರಖ್ಯಾತಿ ಗಳಿಸಿದ್ದ. ಪಾಲಿಟೆಕ್ನಿಕ್ ಪರೀಕ್ಷೆಯಲ್ಲಿ ಈತ ಒಮ್ಮೆ ಫೇಲ್ ಆಗಿದ್ದನಂತೆ. ಈ ಗೋಪುರದದಲ್ಲಿ ಮೂರು ಬೇರೆಬೇರೆ ಹಂತದ ವೀಕ್ಷಕ ಮಾಳಿಗೆಗಳಿವೆ. ಇದರ ತುತ್ತ ತುದಿ ತನಕ ಆರಲು ಲಿಪ್ಟ್ ಗಳಿವೆ.  ಇದು 1887ರಲ್ಲಿ ಕಟ್ಟಲು ಪ್ರಾರಂಭವಾಗಿ ಎರಡು ವರ್ಷಗಳಲ್ಲಿ ಮುಗಿಸಲ್ಪಟ್ಟಿತ್ತು. ಇದರ ನಿರ್ಮಾಣ ಇಂದಿನ ಖರ್ಚು 2 ಲಕ್ಷ ಪೌಂಡುಗಳು . ಈ ಬಾಬ್ತುನಲ್ಲಿ 60 ಸಾವಿರ ಪೌಂಡುನ್ನು ಸರ್ಕಾರ ಕೊಟ್ಟಿತ್ತು . ಮಿಕ್ಕ 1 ಲಕ್ಷ  ನಲವತ್ತು  ಸಾವಿರ ಪೌಂಡು ಹಣವನ್ನು ಗುಸ್ತಾಲ್ ಐಫೆಲ್ ನೇ ಸಾಲ ಮಾಡಿ ಸಂಗ್ರಹಿಸಿದ. ಹೀಗೆ ಉತ್ಸಾಹಿ ಇಂಜನಿಯರ್ ಒಬ್ಬನಿಂದ ಈ ಟವರ್ ನಿರ್ಮಾಣವಾಯ್ತು . ಹೀಗೆ ಅಂದು ಗುಸ್ತಾವ್ ಐಫೆಲ್ ಮಾಡಿದ ಸಾಧನೆ ಇಂದು ಆತನ ಹೆಸೆರು ವಶ್ವ ಮಟ್ಟದಲ್ಲಿ ಚರ್ಚೆ ಯಾಗುವಂತೆ ಮಾಡಿದೆ.

ರಮ್ಯ ವರ್ಷಿಣಿ.ಎ.ಎಸ್.

ಸಮಗ್ರಾಭಿವೃದ್ಧಿ ನ್ಯೂಸ್ ಡೆಸ್ಕ್

Leave A Reply

Your email address will not be published.