ಭಾರತದ ಟೆಕ್ಕಿಗೆ ಎಚ್1ಬಿ ನಿರಾಕರಣೆ, ಟ್ರಂಪ್ ಸರ್ಕಾರ ವಿರುದ್ಧ ದಾವೆ

4,868

ಸ್ಯಾನ್ ಫ್ರಾನಿಸ್ಕೋ, ಮೇ 17: ಭಾರತ ಮೂಲದ ಟೆಕ್ಕಿಯೊಬ್ಬರಿಗೆ ಎಚ್ 1 ಬಿ ವೀಸಾ ನಿರಾಕರಿಸಿದ ಹಿನ್ನಲೆಯಲ್ಲಿ ಸಿಲಿಕಾನ್ ವ್ಯಾಲಿ ಐಟಿ ಕಂಪನಿಯೊಂದು ಡೊನಾಲ್ಡ್ ಟ್ರಂಪ್ ಸರ್ಕಾರದ ವಿರುದ್ಧ ದಾವೆ ಹೂಡಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಪ್ರಹರ್ಷ್ ಚಂದ್ರ ಸಾಯಿ ವೆಂಕಟ್ ಅನಿಸೆಟ್ಟಿ(28) ಅವರನ್ನು ಬಿಸಿನೆಸ್ ಸಿಸ್ಟಮ್ ಅನಾಲಿಸ್ಟ್ ಆಗಿ ಎಕ್ಸ್ ಟೆರ(Xterra) ಸಲ್ಯೂಷನ್ಸ್ ಸಂಸ್ಥೆ ನೇಮಕ ಮಾಡಿಕೊಂಡಿತ್ತು. ಆದರೆ, ಪ್ರಹರ್ಷ್ ಅವರು ಸಲ್ಲಿಸಿದ್ದ ಎಚ್ 1ಬಿ ವೀಸಾವನ್ನು US Citizenship and Immigration Services (USCIS) ನಿರಾಕರಿಸಿದೆ. ಪ್ರಹರ್ಷ ಸಲ್ಲಿಸಿದ್ದ ಅರ್ಜಿ ವೀಸಾ ನಿಯಮಗಳಿಗೆ ಬದ್ಧವಾಗಿಲ್ಲ ಎಂದು ಪ್ರತಿಕ್ರಿಯೆ ನೀಡಲಾಗಿದೆ.

ಗ್ರೀನ್ ಕಾರ್ಡ್, ಎಚ್1ಬಿ ವೀಸಾ ಬಗ್ಗೆ ಟ್ರಂಪ್ ಮಹತ್ವದ ಘೋಷಣೆ

ಪ್ರತಿ ವರ್ಷ 65,000 ವೀಸಾ ವಿತರಿಸಲಾಗುತ್ತದೆ. ಅಮೆರಿಕದ ವಿದ್ಯಾಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡಿ, ಸ್ನಾತಕೋತ್ತರ ಪದವಿ ಪಡೆದ ಕೌಶಲ್ಯಪೂರ್ಣ ವಿದೇಶಿಯರಿಗೆ ಮಾತ್ರ ಹೆಚ್ಚ ಅವಕಾಶ ಸಿಗಲಿದೆ ಎನ್ನಲಾಗಿತ್ತು.

ಅನಿಸೆಟ್ಟಿ ಅವರು ಡಲ್ಲಾಸ್ ನ ಟೆಕ್ಸಾಸ್ ವಿವಿಯಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ಸದ್ಯ ಎಚ್ 4 ಅವಲಂಬಿತ ವೀಸಾ ಹೊಂದಿದ್ದಾರೆ. 2014 ರಿಂದ 2016ರ ಅವಧಿಯಲ್ಲಿ ಎಫ್ 1 ಸ್ಥಾನಮಾನ ಹೊಂದಿರುವ ವಿದ್ಯಾರ್ಥಿ ವೀಸಾ ಹೊಂದಿದ್ದರು. ಈಗ ಎಚ್ 1 ಬಿ ವೀಸಾ ನಿಯಮಕ್ಕೆ ಅನುಗುಣವಾಗಿ ಅರ್ಹತೆ ಹೊಂದಿದ್ದಾರೆ ಎಂದು ಅನಿಸೆಟ್ಟಿ ಪರ ವಕೀಲರು ವಾದಿಸಿದ್ದಾರೆ.

Leave A Reply

Your email address will not be published.