ಇದರ ವಿರುದ್ಧ ಪ್ರತಿಭಟಿಸದಿದ್ದರೆ ಇವರು ಜನರನ್ನು ಗುಲಾಮರಾಗಿಸುತ್ತಾರೆ: ತೇಜ್ ಬಹದ್ದೂರ್ ಯಾದವ್

5,926

ವಾರಾಣಸಿ , ಮೇ 2 : ವಾರಣಾಸಿಯಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಅವರು ತಮ್ಮ ನಾಮಪತ್ರ ತಿರಸ್ಕೃತವಾಗುವ ಕೆಲವೇ ಗಂಟೆಗಳ ಮೊದಲು ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ತಮ್ಮ ನಾಮಪತ್ರ ತಿರಸ್ಕರಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಷಡ್ಯಂತ್ರ ಹೂಡಲಾಗಿದೆ ಎಂದು ಹೇಳಿದ್ದಾರೆ.ಅವರ ಮಾತಿನ ಸಾರಾಂಶ ಇಲ್ಲಿದೆ:

“ನನ್ನ ನಾಮಪತ್ರ ತಿರಸ್ಕರಿಸಲು ಷಡ್ಯಂತ್ರ ಮಾಡಲಾಗಿದೆ. ಇಲ್ಲಿನ ಜಿಲ್ಲಾಧಿಕಾರಿ ಕಾನೂನನ್ನು ತನಗೆ ಬೇಕಾದಂತೆ ಬದಲಾಯಿಸಿದ್ದಾರೆ. ಮೊದಲು ಮಧ್ಯಾಹ್ನ 3 ಗಂಟೆಗೆ ಒಂದು ನೋಟಿಸ್ ನೀಡಿ ಉತ್ತರಿಸುವಂತೆ ಕೇಳಲಾಗುತ್ತದೆ. ಅದಕ್ಕೆ ನಮ್ಮ ವಕೀಲರು ಉತ್ತರಿಸುತ್ತಾರೆ. ಮತ್ತೆ ಸಂಜೆ 6 ಗಂಟೆಗೆ ಇನ್ನೊಂದು ನೋಟಿಸ್ ನೀಡಿ ನೀವು ದಿಲ್ಲಿಗೆ ಹೋಗಿ ಚುನಾವಣಾ ಆಯೋಗದಿಂದ ನಿರಪೇಕ್ಷಣಾ ಪತ್ರ ತಂದು ರಾತ್ರಿ 11 ಗಂಟೆಯೊಳಗೆ ನೀಡಬೇಕು ಎಂದು ಹೇಳಲಾಗುತ್ತದೆ.”

“ನಾವು ಎಲ್ಲ ದಾಖಲೆ ಜೊತೆ ಎಪ್ರಿಲ್ 24 ರಂದು ನಾಮಪತ್ರ ಸಲ್ಲಿಸಿದಾಗ ಅದರಲ್ಲಿ ಅಫಿಡವಿಟ್ ಕೂಡ ಇತ್ತು. ಆಗ ನನ್ನ ಎಲ್ಲ ದಾಖಲೆ ಸರಿಯಾಗಿದೆ ಎಂದು ಹೇಳಿದ್ದಾರೆ. ಆದರೆ ನಾನು ಎಪ್ರಿಲ್ 29 ಕ್ಕೆ ಮತ್ತೆ ನಾಮಪತ್ರ ಸಲ್ಲಿಸಿದಾಗಗಲೂ ಯಾವುದೇ ಆಕ್ಷೇಪ ಇರಲಿಲ್ಲ. ಆದರೆ 30 ರಂದು ನರೇಂದ್ರ ಮೋದಿ ಅವರ ಚಮಚಾಗಳು ವಿಮಾನದ ಮೂಲಕ ಬಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಹೇಗಾದರೂ ನನ್ನ ನಾಮಪತ್ರ ತಿರಸ್ಕರಿಸಬೇಕು ಎಂದು ಹೇಳಿದ ಮೇಲೆ ನನ್ನ ನಾಮಪತ್ರ ತಿರಸ್ಕರಿಸಲಾಗಿದೆ.”

“ಇದನ್ನು ಪ್ರತಿಭಟಿಸಲು ಇಡೀ ದೇಶ ನನ್ನ ಜೊತೆ ಕೈಜೋಡಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಇದು ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟವಾಗಿದೆ. ಇಲ್ಲಿ ಪ್ರಜಾಪ್ರಭುತ್ವದ ಹತ್ಯಯಾಗುತ್ತಿದೆ. ಪ್ರತಿಭಟನೆ ನಡೆಸದಿದ್ದರೆ ದೇಶದ ಜನರನ್ನು ಇವರು ಗುಲಾಮರಾಗಿಸುತ್ತಾರೆ. ಇಡೀ ದೇಶದ ಜನರು ತಮಗೆ ಸಾಧ್ಯವಿರುವ ಯಾವುದೇ ಮಾಧ್ಯಮ ವೇದಿಕೆಗಳ ಮೂಲಕ ಕೇಂದ್ರ ಸರಕಾರವನ್ನು ಪ್ರಶ್ನಿಸಬೇಕಾಗಿದೆ. ಯೋಗಿ ( ಆದಿತ್ಯನಾಥ್ ) ಮತ್ತು ( ನರೇಂದ್ರ ) ಮೋದಿ ರಾತ್ರಿ 2 ಗಂಟೆಗೆ ಅಧಿಕಾರಿ ಳ ಜೊತೆ ಸಭೆ ನಡೆಸಿದ್ದಾರೆ. ನಿಮಗೆ ಇಷ್ಟು ಹೆದರಿಕೆ ಇದ್ದರೆ ನೇರವಾಗಿ ಬಂದು ಹೋರಾಡಿ, ಬೆನ್ನಿಗೆ ಚೂರಿ ಇರಿಯಬೇಡಿ. ಇದು ನಿಮಗೆ ನನ್ನ ಸವಾಲು. “

ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರು ಟ್ವೀಟ್ ಮಾಡಿರುವ ಈ ವಿಡಿಯೋ ಇಲ್ಲಿದೆ :

Leave A Reply

Your email address will not be published.