ವಂದೇ ಮಾತರಂ ಹಾಡದವರನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಸುರೇಂದ್ರ ಸಿಂಗ್

4,688

ಲಕ್ನೋ, ಏ.27: ವಂದೇ ಮಾತರಂ ಗೀತೆ ಹಾಡದವರಿಗೆ ಭಾರತದಲ್ಲಿ ಜೀವಿಸುವ ಯಾವ ಹಕ್ಕೂ ಇಲ್ಲ ಅಂಥವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಉತ್ತರ ಪ್ರದೇಶದ ಸಚಿವ ಸುರೇಂದ್ರ ಸಿಂಗ್ ಗುಡುಗಿದ್ದಾರೆ.

ವಂದೇ ಮಾತರಂ ಗೀತೆ ಹಾಡುವುದು ಒಂದು ಭಾವನಾತ್ಮಕ ವಿಷಯ. ಭಾರತದಲ್ಲಿ ವಾಸವಾಗಿದ್ದೀರಿ ಎಂದಾದಮೇಲೆ ವಂದೇ ಮಾತರಂ ಹಾಡಲೇಬೇಕು. ಇದು ಸಂಸ್ಕೃತವಾಗಿದ್ದರೂ ಉರ್ದುವಿಗೂ ಭಾಷಾಂತರವಾಗಿದೆ. ಯಾರು ಈ ಗೀತೆಯನ್ನು ಹಾಡಲು ಆಸಕ್ತಿ ತೋರಿಸುವುದಿಲ್ಲವೋ, ಅವರು ಭಾರತದಲ್ಲಿ ವಾಸಿಸಲು ಯೋಗ್ಯರಲ್ಲ ಎಂದರು.

ಇದಕ್ಕೆ ಸಂಬಂಧಪಟ್ಟಂತೆ ಕ್ರಮ ಕೈಗೊಳ್ಳುವ ಅಧಿಕಾರ ನನಗೆ ಕೊಟ್ಟರೆ, ಅಂತಹವರನ್ನು ಒಂದೇ ವಾರದಲ್ಲಿ ಪಾಸ್​ಪೋರ್ಟ್​ ಮಾಡಿಸಿ ಪಾಕಿಸ್ತಾನಕ್ಕೆ ಕಳಿಸುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಶಾಸಕರು ಹಿಂದೊಮ್ಮೆ ಸೋನಿಯಾ ಗಾಂಧಿಯವರನ್ನು ಭಾರತೀಯ ಡ್ಯಾನ್ಸರ್​ ಸಪ್ನಾ ಚೌಧರಿಗೆ ಹೋಲಿಸಿದ್ದರು. ಭಾರತದಲ್ಲಿ ಸಪ್ನಾ ಚೌಧರಿಯ ವೃತ್ತಿ ಯಾವುದೋ, ಅದೇ ವೃತ್ತಿಯನ್ನು ಇಟಲಿಯಲ್ಲಿ ಸೋನಿಯಾ ಗಾಂಧಿ ನಡೆಸುತ್ತಿದ್ದರು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು ಈಗ ಮತ್ತೊಂದು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Leave A Reply

Your email address will not be published.