ಟಿಕ್‍ ಟಾಕ್‍ ಬ್ಯಾನ್‍ ನಿಂದ ಕಂಪನಿಗಾಗ್ತಿರೋ ನಷ್ಟ ಎಷ್ಟು ಗೊತ್ತಾ..?

4,135

ಚೀನಾ ಮೂಲದ ಬೈಟ್ ಡ್ಯಾನ್ಸ್ ಕಂಪನಿಯ ಖ್ಯಾತ ವಿಡಿಯೋ ಆಪ್‍ ಟಿಕ್‍ ಟಾಕ್ ನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ಆ ಕಂಪನಿಗೆ ದಿನಕ್ಕೆ 4.5 ಕೋಟಿ ರೂಪಾಯಿ ನಷ್ಟವಾಗ್ತಿದೆ.

ಟಿಕ್‍ ಟಾಕ್ ಆಪ್‍ ನಿಷೇಧಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಬೈಟ್‍ ಡ್ಯಾನ್ಸ್ ಕಂಪನಿ ಪರ ವಕೀಲ ಅಭಿಷೇಕ್‍ ಮನು ಸಿಂಘ್ವಿ, ಆಪ್ ನಿಷೇಧದ ಬಳಿಕ ಕಂಪನಿಗೆ ಮಾತ್ರವಲ್ಲ, 250 ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ. ಅಲ್ಲದೆ 20 ಲಕ್ಷ ಗ್ರಾಹಕರಿಗೆ ತೊಂದರೆಯಾಗ್ತಿದೆ ಅಂತಾ ವಾದ ಮಂಡಿಸಿದ್ರು.

ಟಿಕ್‍ ಟಾಕ್‍ ನಿಷೇಧ ಕುರಿತಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ಅರ್ಜಿಯ ವಿಚಾರಣೆಯನ್ನು ಮದ್ರಾಸ್‍ ಹೈಕೋರ್ಟ್‍ ಗೆ ವರ್ಗಾಯಿಸಿದೆ. ಟಿಕ್‍ ಟಾಕ್ ಆಪ್ ಕುರಿತು ಅರ್ಜಿಯಲ್ಲಿರುವ ತಕರಾರುಗಳಿಗೆ ಬೈಟ್ ಡ್ಯಾನ್ಸ್ ಸಂಸ್ಥೆ ಕೋರ್ಟ್ ನಲ್ಲಿ ಪ್ರಶ್ನಿಸಬಹುದು. ಒಂದು ವೇಳೆ ಏಪ್ರಿಲ್ 24 ರಂದು ಅಂದ್ರೆ ಇವತ್ತು ಈ ಕುರಿತು ನಿರ್ಧಾರ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ವಿಫಲವಾದರೆ ಆಗ ಆಪ್‍ ಬ್ಯಾನ್ ಕುರಿತಂತೆ ಆದೇಶ ರದ್ದುಗೊಳ್ಳುತ್ತದೆ ಎಂದು ಸುಪ್ರಿಂ ಕೋರ್ಟ್ ತಿಳಿಸಿದೆ.

ಈ ಅಪ್ಲಿಕೇಶನ್‍ ನಲ್ಲಿ ಆಕ್ಷೇಪಾರ್ಹ ವಿಡಿಯೋಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗ್ತಿದೆ ಅಂತಾ ಸಾರ್ವಜನಿಕರು ದೂರಿದ್ರು. ಹೀಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ರು.ಅರ್ಜಿ ಪುರಸ್ಕರಿಸಿದ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆಪ್ ನಿಷೇಧಿಸುವಂತೆ ಏಪ್ರಿಲ್ 3 ರಂದು ಮಧ್ಯಂತರ ಆದೇಶ ಹೊರಡಿಸಿತ್ತು. ಆದ್ರೆ ಈ ಆದೇಶಕ್ಕೆ ತಡೆ ನೀಡುವಂತೆ ಬೈಟ್‍ ಡ್ಯಾನ್ಸ್ ಕಂಪನಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

Leave A Reply

Your email address will not be published.