ಅಕ್ಷಯ್ ಕುಮಾರ್ ಜೊತೆ ಮೋದಿ ‘ಮನ್ ಕೀ ಬಾತ್’ – ಮಾತುಕತೆಯಲ್ಲಿದ್ದವು ಪ್ರಮುಖ ಅಂಶಗಳು

4,226

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಂದು ನವದೆಹಲಿಯಲ್ಲಿ ಭೇಟಿಯಾಗಿ ಉಭಯಕುಶಲೋಪರಿಯಾಗಿ ಮಾತನಾಡಿದ್ದಾರೆ.

ಈ ವೇಳೆ ಮೋದಿ ಅವರಾಡಿದ ಮನದಾಳದ ಮಾತುಗಳಲ್ಲಿ ಐದು ಅಂಶಗಳು ಪ್ರಮುಖವಾಗಿದ್ದು, ಆ ಮಾತುಕತೆಯ ಒಂದು ಝಲಕ್ ಇಲ್ಲಿದೆ.

1. ನಾನು ಪ್ರಧಾನಿ ಆಗುತ್ತೇನೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ನನ್ನಂಥ ಒಬ್ಬ ಸಾಮಾನ್ಯ ಮನುಷ್ಯ ಹಾಗಂದುಕೊಳ್ಳುವುದು ಸಾಧ್ಯವೂ ಇರಲಿಲ್ಲ.

2. ಮೊದಲು ನನಗೊಂದು ಬ್ಯಾಂಕ್ ಖಾತೆಯೇ ಇರಲಿಲ್ಲ. ಶಾಲಾ ದಿನಗಳಲ್ಲಿ ದೇನಾ ಬ್ಯಾಂಕ್‌ ನವರು ಬಂದು ಒಂದು ಖಾತೆ ಮಾಡಿಸಿದ್ದರು. ಸಾಕಷ್ಟು ಹಣ ಇರದೆ ನಿಷ್ಕ್ರಿಯ ಆದ ಆ ಖಾತೆ ರದ್ದುಗೊಳಿಸಬೇಕಂತ ಬ್ಯಾಂಕ್‌ ನವರು ನನ್ನನ್ನು ಹುಡುಕಿಕೊಂಡು ಬಂದಿದ್ದರು. 32 ವರ್ಷಗಳ ಬಳಿಕ ನಾನು ಚಿಕ್ಕಂದಿನಲ್ಲಿ ಮಾಡಿದ ಖಾತೆ ಅವರಲ್ಲಿದೆ ಎಂದು ಬ್ಯಾಂಕ್‌ ನವರು ಹೇಳಿದ್ದರು.

3. ನಾನೊಬ್ಬ ಅಲೆಮಾರಿ, ನನ್ನ ಪ್ರಶ್ನೆಗಳಿಗೆ ನಾನೇ ಉತ್ತರ ಕಂಡುಕೊಳ್ಳುತ್ತೇನೆ. ಅದೇ ನನ್ನನ್ನು ಡಿಟ್ಯಾಚ್‌ಮೆಂಟ್‌ಗೆ ಕರೆದೊಯ್ಯಿತು. ಕೊನೆಗೆ ಅಮ್ಮನನ್ನು ನನ್ನ ಜೊತೆಗೆ ಬಂದಿರುವಂತೆ ಹೇಳಿದರೂ ಅಲ್ಲೇ ಇರುವುದಾಗಿ ಹೇಳಿ ಉಳಿದರು.

4. ನಾನು ಸುಲಭದಲ್ಲಿ ಸಿಟ್ಟಾಗುವುದಿಲ್ಲ, ಆದರೆ ಅದು ಮನುಷ್ಯ ಸಹಜ ಗುಣ. ಸಿಟ್ಟು ನಕಾರಾತ್ಮಕ ಭಾವನೆ ಹೊರಹೊಮ್ಮಿಸುತ್ತದೆ. ವೃತ್ತಿಜೀವನ ಆರಂಭವಾದ ಮೇಲೆ ಸಿಟ್ಟಾಗುವುದಕ್ಕೆ ಅವಕಾಶವೇ ಸಿಗಲಿಲ್ಲ. ಸಿಟ್ಟಾಗುವುದೇ ಬೇರೆ, ಸ್ಟ್ರಿಕ್ ಆಗಿರುವುದೇ ಬೇರೆ.

5. ನಾನು ಭಾವುಕನಾದಾಗ ಏನಾದರೂ ಬರೆಯುತ್ತೇನೆ. ಆಮೇಲೆ ಅದನ್ನು ಓದಿ ವಿಶ್ಲೇಷಿಸುತ್ತೇನೆ. ಇದು ನನಗೆ ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ನೆರವಾಗಿದೆ. ಆದರೆ ನನಗೆ ಅಷ್ಟು ಸಮಯ ಸಿಗುತ್ತಿಲ್ಲ. ಹೀಗೆ ನಾನು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುವುದನ್ನು ಕಲಿತಿದ್ದೇನೆ.

Leave A Reply

Your email address will not be published.