ಮತ್ತೆ ಆರಂಭವಾದ ಟೈಗರ್ ಟೆಂಪಲ್ !

4,567

ಥೈಲ್ಯಾಂಡ್ : 20 ಏಪ್ರಿಲ್

ಥೈಲ್ಯಾಂಡಿನಲ್ಲಿರುವ ಟೈಗರ್ ಟೆಂಪಲ್ ವಿಶ್ವದ ಪ್ರಸಿದ್ಧ ಸ್ಥಳಗಳಲ್ಲಿ ಒಂದು. ಟೈಗರ್ ಅಂದರೇನೆ ಕಿಲೋಮೀಟರ್ ಗಟ್ಟಲೇ ಓಡಿ ಹೋಗುವ ಜನರಿಗೆ ಈ ತಾಣ ವಿಶೇಷವಾಗಿದೆ. ಟೈಗರ್ ಗಳಿಗೆ ಅಂತಲೆ ಒಂದು ದೇವಾಲಯವಿದೆ ಅಂದ್ರೆ ಅದು ಟೈಗರ್ ಟೆಂಪಲ್ ಮಾತ್ರ. ಹುಲಿಗಳನ್ನು ಸಾಕಿ ಬೆಳೆಸುವ ಆಧ್ಯಾತ್ಮಿಕ ಪ್ರಸಿದ್ಧ ತಾಣವಾಗಿದ್ದ ಈ ಟೈಗರ್ ಟೆಂಪಲ್ ಕಳೆದ ಎರಡು ವರ್ಷಗಳ ಹಿಂದೆ ಮುಚ್ಚಲ್ಪಟ್ಟಿತ್ತು. ಆಕಸ್ಮಿಕವಾದ ಹುಲಿಯ ಸಾವುಗಳಿಂದ ಕಂಗಲಾಗಿದ್ದ ಟೈಗರ್ ದೇವಾಲಯದ ಮುಖ್ಯಸ್ಥರ ಮೇಲೆ ದೂರುಗಳು ದಾಖಲಾಗಿದ್ದವು.

ಕ್ರಿಮಿನಲ್ ಮೊಕದ್ದಮೆ ಅಡಿಯಲ್ಲಿ ನಿಷೇಧಕ್ಕೊಳಗಾಗಿದ್ದ ಟೈಗರ್ ಟೆಂಪಲ್ ಮತ್ತೇ ಆರಂಭವಾಗಿದೆ. ಹುಲಿಗಳ ಜೊತೆ ಕಾಲ ಕಳೆಯಬೇಕು, ಹುಲಿಗಳ ಜೊತೆ ಆಟವಾಡಿ ತಮ್ಮ ರಜಾ ದಿನಗಳನ್ನ ಎಂಜಾಯ್ ಮಾಡಬೇಕು ಅಂದು ಕೊಂಡವರು ಈ ಥೈಲ್ಯಾಂಡಿನಲ್ಲಿರುವ ಈ ಟೈಗರ್ ಟೆಂಪಲ್ ಗೆ ಒಂದು ಸಲ ಹೋಗಲೇಬೇಕು.

ವರದಿ : ಸಮಗ್ರಾಭಿವೃದ್ಧಿ ನ್ಯೂಸ್ ಡೆಸ್ಕ್

Leave A Reply

Your email address will not be published.