ಪ್ರಧಾನಿ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

4,707

ನವದೆಹಲಿ, ಏಪ್ರಿಲ್ 12: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾದ ಅತ್ಯುನ್ನತ ಪ್ರಶಸ್ತಿ ‘ಆರ್ಡರ್ ಆಫ್ ಸೇಂಟ್ ಆಂಡ್ರೂ ದಿ ಅಪೋಸ್ಟಲ್’ ಗೌರವ ದೊರೆತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಷ್ಯಾ ಮತ್ತು ಭಾರತದ ನಡುವೆ ವಿಶೇಷ ಮತ್ತು ಮಹತ್ವದ ಕಾರ್ಯತಂತ್ರ ಪಾಲುದಾರಿಕೆಯನ್ನು ಉತ್ತೇಜಿಸುವಲ್ಲಿ ಅಮೋಘ ಸೇವೆ ಸಲ್ಲಿಸಿದ್ದಕ್ಕಾಗಿ ಈ ಗೌರವ ನೀಡಲಾಗಿದೆ ಎಂದು ರಷ್ಯಾದ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಮುಡಿಗೆ UAE ದೇಶದ ಅತ್ಯುನ್ನತ ನಾಗರಿಕ ಗೌರವ

‘ಆರ್ಡರ್ ಆಫ್ ಸೇಂಟ್ ಆಂಡ್ರೂ ದಿ ಅಪೋಸ್ಟಲ್’ ರಷ್ಯಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

2017ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಈ ಗೌರವ ನೀಡಲಾಗಿತ್ತು. ಈ ಪ್ರಶಸ್ತಿಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏಳು ಉನ್ನತ ಜಾಗತಿಕ ಪ್ರಶಸ್ತಿಗಳು ದೊರೆದಂತಾಗಿವೆ.

ಸಿಯೋಲ್ ಶಾಂತಿ ಪ್ರಶಸ್ತಿ ಸ್ವೀಕರಿಸಿದ ಮೋದಿ, ನಮಾಮಿ ಗಂಗೆಗೆ ಅರ್ಪಣೆ

ರಷ್ಯಾ ಒಕ್ಕೂಟದ ಅತ್ಯುನ್ನತ ಪ್ರಶಸ್ತಿಯಾಗಿರುವ ಇದು, ಅಲ್ಲಿನ ಅತ್ಯಂತ ಪ್ರಾಚೀನ ಪ್ರಶಸ್ತಿಯೂ ಆಗಿದೆ. 1698ರಲ್ಲಿ ಇದನ್ನು ರಷ್ಯಾದ ರಾಜಪ್ರಭುತ್ವ ಸ್ಥಾಪಿಸಿತ್ತು. ಸೋವಿಯತ್ ಆಡಳಿತದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿತ್ತು. ಬಳಿಕ ಒಕ್ಕೂಟ ವಿಭಜನೆಯಾದ ನಂತರ 1998ರಲ್ಲಿ ಅದನ್ನು ಪುನಃ ಆರಂಭಿಸಲಾಯಿತು.

ಒಂದು ವಾರದ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್(UAE) ನ ಅತ್ಯುನ್ನತ ನಾಗರಿಕ ಗೌರವವನ್ನು ಪ್ರಕಟಿಸಲಾಗಿತ್ತು. ಯುಎಇ ಅಧ್ಯಕ್ಷ ಖಾಲಿಫಾ ಬಿನ್ ಜಾಯೇದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ಪ್ರಧಾನಿ ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಗೌರವವಾದ ‘ಝಾಯದ್ ಮೆಡಲ್’ ಅನ್ನು ಘೋಷಿಸಿದ್ದರು.

Leave A Reply

Your email address will not be published.