ವಾಟ್ಸನ್, ತಾಹೀರ್ ಮಕ್ಕಳ ಜತೆ ಧೋನಿ ರನ್ನಿಂಗ್ ರೇಸ್

5,474

ಚೆನ್ನೈ, ಏಪ್ರಿಲ್ 09: ಐಪಿಎಲ್ 2019ರಲ್ಲಿ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಂತೆ ಮಾಡಿರುವ ಚೆನ್ನೈ ಸೂಪರ್​ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರು ಸಕತ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು. ಪಂಜಾಬ್ ವಿರುದ್ಧ ಪಂದ್ಯ ಗೆದ್ದ ಖುಷಿಯಲ್ಲಿದ್ದ ಮೈದಾನದಲ್ಲಿ ಮಕ್ಕಳೊಡನೆ ನಾಯಕ ಎಂ.ಎಸ್ ಧೋನಿ ಆಟವಾಡುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಮಗುವೊಂದನ್ನು ಹೊತ್ತು ನಗುಮೊಗದಲ್ಲಿ ಧೋನಿ ಓಡಿ ಬರುವ ದೃಶ್ಯ ನೋಡಿದ ಎಲ್ಲರೂ ಯಾರು ಆ ಪುಟ್ಟ ಹುಡುಗ ಎಂದು ಕುತೂಹಲದಿಂದ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರಂತೆ. ತಂಡದ ಸಹ ಆಟಗಾರರಾದ ಇಮ್ರಾನ್​ ತಾಹಿರ್​ ಹಾಗೂ ಶೇನ್​ ವ್ಯಾಟ್ಸನ್​ ಮಕ್ಕಳೊಂದಿಗೆ ಧೋನಿ ಸಂಭ್ರಮ ಹಂಚಿಕೊಂಡಿದ್ದಾರೆ.

Leave A Reply

Your email address will not be published.