ಲೋಕಪಾಲಕ್ಕೆ ಮುಹೂರ್ತ

2,631

ನವದೆಹಲಿ: ಸುಪ್ರೀಂಕೋರ್ಟ್ ಎಚ್ಚರಿಕೆ ಬಳಿಕ ಕೊನೆಗೂ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆ ವರ್ಷದಲ್ಲೇ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲದ ಮುಖ್ಯಸ್ಥರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದೆ. ಲೋಕಪಾಲ ಕಾಯ್ದೆ ಜಾರಿಗೆ ಬಂದ ಸುಮಾರು ಐದು ವರ್ಷಗಳ ಬಳಿಕ ಲೋಕಪಾಲ ಮುಖ್ಯಸ್ಥ ಹಾಗೂ ಎಂಟು ಸದಸ್ಯರ ನೇಮಕಾತಿ ಸಂಬಂಧ ರಚಿತವಾಗಿದ್ದ ಶೋಧ ಸಮಿತಿ ಬುಧವಾರ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸಮಿತಿ ಅಧ್ಯಕ್ಷರೂ ಆಗಿರುವ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಹುದ್ದೆ ಭರ್ತಿಗಾಗಿ ಜಾಹೀರಾತು ನೀಡಿದ್ದಾರೆ. ಅರ್ಜಿ ಸಲ್ಲಿಕೆಗೆ ಫೆ.22ರವರೆಗೆ ಅವಕಾಶ ನೀಡಲಾಗಿದೆ. ಫೆಬ್ರವರಿ ಅಂತ್ಯದ ಒಳಗೆ ಲೋಕಪಾಲಕ್ಕೆ ಹೆಸರು ಶಿಫಾರಸು ಮಾಡುವಂತೆ ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ಶೋಧ ಸಮಿತಿಗೆ ಸೂಚನೆ ನೀಡಿತ್ತು.

Leave A Reply

Your email address will not be published.