ಫೆ.15ಕ್ಕೆ ವಂದೇ ಭಾರತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ

2,385

ನವದೆಹಲಿ: ಭಾರತದ ಅತಿ ವೇಗವಾಗಿ ಚಲಿಸುವ ಇಂಜಿನ್​ ರಹಿತ ರೈಲಿನಲ್ಲಿ ನವದೆಹಲಿಯಿಂದ ವಾರಾಣಸಿಗೆ ಹಾಗೂ ವಾರಾಣಸಿಯಿಂದ ನವದೆಹಲಿಗೆ ಪ್ರಯಾಣಿಸುವ ಜನರ ಕನಸು ಫೆ.15ರಂದು ನನಸಾಗಲಿದೆ. ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 10 ಗಂಟೆಗೆ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

ಗಂಟೆಗೆ 180 ಕಿ.ಮೀ. ವೇಗವಾಗಿ ಚಲಿಸಲು ಸಮರ್ಥವಾಗಿರುವ ಈ ರೈಲು ಆರಂಭದಲ್ಲಿ ಗಂಟೆಗೆ 130 ಕಿ.ಮೀ. ವೇಗವಾಗಿ ಸಂಚರಿಸಲಿದೆ. ದೆಹಲಿ ಮತ್ತು ವಾರಾಣಸಿ ನಡುವೆ ಇರುವ 770 ಕಿ.ಮೀ. ಅಂತರವನ್ನು 8 ಗಂಟೆಗಳಲ್ಲಿ ಕ್ರಮಿಸಲಿದೆ.

ಶನಿವಾರದಿಂದ ನಿತ್ಯ ಸಂಚಾರ: ವಂದೇ ಭಾರತ ರೈಲು ನವದೆಹಲಿ ಮತ್ತು ವಾರಾಣಸಿ ನಡುವೆ ಶನಿವಾರದಿಂದ ನಿತ್ಯ ಸಂಚರಿಸಲಿದೆ. ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ವಾರಾಣಸಿ ತಲುಪಲಿದೆ. ಮಧ್ಯಾಹ್ನ 3 ಗಂಟೆಗೆ ವಾರಾಣಸಿಯಿಂದ ಹೊರಟು ರಾತ್ರಿ 11 ಗಂಟೆಗೆ ನವದೆಹಲಿ ತಲುಪಲಿದೆ. ಮಾರ್ಗ ಮಧ್ಯದಲ್ಲಿ ಕಾನ್ಪುರ ಮತ್ತು ಪ್ರಯಾಗ್​ರಾಜ್​ಗಳಲ್ಲಿ ನಿಲುಗಡೆ ನೀಡಲಿದೆ.

Leave A Reply

Your email address will not be published.