ಮೊಬೈಲ್ ಗ್ರಾಹಕರನ್ನು ಸೆಳೆದಿದೆ ಅಗ್ಗದ ಈ ಮೂರು ಪ್ಲಾನ್

4,595

ಟೆಲಿಕಾಂ ಕಂಪನಿಗಳ ಮಧ್ಯೆ ಬೆಲೆ ಯುದ್ಧ ನಡೆಯುತ್ತಲೇ ಇದೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರ್ತಿವೆ. ಟೆಲಿಕಾಂ ಕ್ಷೇತ್ರದಲ್ಲಿ ಧಮಾಲ್ ಮಾಡಿದ್ದ ರಿಲಾಯನ್ಸ್ ಜಿಯೋ ಇದ್ರಲ್ಲಿ ಮುಂದಿದೆ. ರಿಲಾಯನ್ಸ್ ಜಿಯೋ ಕೆಲ ಅಗ್ಗದ ಪ್ಲಾನ್ ಗಳನ್ನು ಗ್ರಾಹಕರಿಗೆ ನೀಡ್ತಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಜಿಯೋದ ಅತ್ಯಂತ ಅಗ್ಗದ ಪ್ಲಾನ್ 19 ರೂಪಾಯಿಯದ್ದಾಗಿದೆ. 19 ರೂಪಾಯಿ ಈ ಪ್ಲಾನ್ ನಲ್ಲಿ ಇಂಟರ್ನೆಟ್, ಕರೆ ಮತ್ತು ಎಸ್‌ಎಂಎಸ್ ಸೌಲಭ್ಯ ನಿಮಗೆ ಸಿಗಲಿದೆ. ಈ ಪ್ಲಾನ್ ನಲ್ಲಿ 0.15 ಜಿಬಿ ಡೇಟಾ ಹಾಗೂ ಯಾವುದೇ ನಂಬರ್ ಗೆ ಅನಿಯಮಿತ ಕರೆ ಸೌಲಭ್ಯ ಸಿಗುತ್ತಿದೆ.

ಜಿಯೋದ ಎರಡನೇ ಅಗ್ಗದ ಪ್ಲಾನ್ ಬೆಲೆ 52 ರೂಪಾಯಿ. ಪ್ರತಿ ದಿನ ಗ್ರಾಹಕರಿಗೆ 2ಜಿಬಿ ಡೇಟಾ ಲಭ್ಯವಾಗಲಿದೆ. ಅನಿಯಮಿತ ಕರೆ ಸೌಲಭ್ಯ ಕೂಡ ಸಿಗುತ್ತದೆ. ಬಳಕೆದಾರರಿಗೆ 300 ಮೆಸ್ಸೇಜ್ ಸಿಗಲಿದೆ. 28 ದಿನಗಳ ಕಾಲ ಗ್ರಾಹಕರು ಇದ್ರ ಲಾಭ ಪಡೆಯಬಹುದಾಗಿದೆ.

100 ರೂಪಾಯಿಗಿಂತ ಕಡಿಮೆ ಬೆಲೆಯ ಜಿಯೋದ ಕೊನೆಯ ಪ್ಲಾನ್ 98 ರೂಪಾಯಿಯದ್ದು. ಈ ಪ್ಲಾನ್ ನಲ್ಲಿ ಕೂಡ ಪ್ರತಿ ದಿನ 2 ಜಿಬಿ ಡೇಟಾ ಸಿಗುತ್ತದೆ. ಇದು ಕೂಡ 28 ದಿನಗಳ ಸಿಂಧುತ್ವ ಹೊಂದಿದ್ದು, ಅನಿಯಮಿತ ಕರೆ, 300 ಎಸ್‌ಎಂಎಸ್ ಪ್ರತಿದಿನ ನೀಡ್ತಿದೆ.

Leave A Reply

Your email address will not be published.