ಲಾವಾ ಬಿಡುಗಡೆ ಮಾಡಿದ ಹೊಸ ಫೋನ್ ನ ಬೆಲೆ ಎಷ್ಟು ಗೊತ್ತಾ?

2,395

ಲಾವಾ ಇಂಟರ್ನ್ಯಾಷನಲ್ ಮಂಗಳವಾರ ತನ್ನ ಹೊಸ ಸ್ಮಾರ್ಟ್ಫೋನ್ Z92 ಬಿಡುಗಡೆ ಮಾಡಿದೆ. ಕೃತಕ ಬುದ್ದಿಮತ್ತೆ ಗೇಮಿಂಗ್ ಮೋಡ್ ಹೊಂದಿರುವ ಸ್ಮಾರ್ಟ್ಫೋನ್ ಬೆಲೆ ಭಾರತದಲ್ಲಿ 9,999 ರೂಪಾಯಿ. 6.22 ಇಂಚಿನ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಫೋನ್ ಹೊಂದಿದೆ.

Z92 ಸ್ಮಾರ್ಟ್ಫೋನ್ 3 ಜಿಬಿ ರ್ಯಾಮ್ ಹಾಗೂ 32 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಕಾರ್ಡ್ ಸಹಾಯದಿಂದ ಇದನ್ನು 256 ಜಿಬಿಯವರೆಗೆ ವಿಸ್ತರಿಸಬಹುದಾಗಿದೆ. ಕೃತಕ ಬುದ್ದಿಮತ್ತೆ ಗೇಮಿಂಗ್ ಮೋಡ್, ಬಳಕೆದಾರರಿಗೆ ಯಾವುದೇ ಅಡೆತಡೆಯಿಲ್ಲದೆ ಆಟವಾಡಲು ನೆರವಾಗಲಿದೆಯಂತೆ.

ಫೋನ್ ಗೆ ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ ಒಂದುವರೆ ದಿನಗಳ ಕಾಲ ಇದನ್ನು ಬಳಸಬಹುದಂತೆ. Z92 ಸ್ಮಾರ್ಟ್ಫೋನ್ ಮೇಲೆ ಜಿಯೋ ಆಫರ್ ಕೂಡ ಸಿಗ್ತಿದೆ. ಜಿಯೋ ಗ್ರಾಹಕರಿಗೆ ಕ್ಯಾಶ್ಬ್ಯಾಕ್ ಜೊತೆ ಡೇಟಾ ಆಫರ್ ಕೂಡ ಸಿಗ್ತಿದೆ. 13 ಮೆಗಾಪಿಕ್ಸಲ್ ರಿಯಲ್ ಕ್ಯಾಮರಾ ಜೊತೆ 8 ಮೆಗಾಪಿಕ್ಸಲ್ ನ ಸೆಲ್ಫಿ ಕ್ಯಾಮರಾವನ್ನು ಮೊಬೈಲ್ ಗೆ ನೀಡಲಾಗಿದೆ.

Leave A Reply

Your email address will not be published.