ಭಾರತ್ ಬಂದ್ : ಮುಂದೂಡಿಕೆಯಾಗುತ್ತಾ ವಿವಿ ಪರೀಕ್ಷೆ..?

4,351

ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ, ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿ ಯು) ಬಂದ್ ಕರೆ ನೀಡಿದೆ. ಜನವರಿ 8 ಹಾಗೂ 9 ರಂದು ಎರಡು ದಿನಗಳ ಕಾಲ ಬಂದ್ ನಡೆಯಲಿದ್ದು, ಈ ನಿಟ್ಟಿನಲ್ಲಿ ಹಲವು ಸೇವೆಗಳು ವ್ಯತ್ಯಯವಾಗಲಿದೆ.

ನಾಳೆ ಭಾರತ್ ಬಂದ್ ಹಿನ್ನೆಲೆ ಬೆಂಗಳೂರು ವಿವಿ ಪರೀಕ್ಷೆಗಳು ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಎಲ್.ಎಲ್.ಬಿ ಹಾಗೂ ಸಿವಿಲ್ ಇಂಜಿನಿಯರಿಂಗ್ ಪರೀಕ್ಷೆಗಳು ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಇನ್ನೂ ಕೂಡ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಸೋಮವಾರ ಸಂಜೆ ವೇಳೆ ವಿವಿ ತನ್ನ ಅಂತಿಮ ನಿರ್ಧಾರ ಪ್ರಕಟ ಮಾಡಲಿದೆ.

ಜನವರಿ 8 – 9 ರಂದು ಭಾರತ್ ಬಂದ್ : ಏನಿರುತ್ತೆ..? ಏನಿರಲ್ಲ..?

ವಿಟಿಯು ಪರೀಕ್ಷೆ ಮುಂದೂಡಿಕೆ ಸಾಧ್ಯತೆ : ಎರಡು ದಿನಗಳ ಕಾಲ ರಾಷ್ಟ್ರಾದ್ಯಂತ ಬಂದ್ ಹಿನ್ನೆಲೆ ವಿಟಿಯುನಲ್ಲಿ ನಡೀಬೇಕಿದ್ದ ಪರೀಕ್ಷೆಗಳೂ ಕೂಡ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ಈ ಬಗ್ಗೆಯೂ ವಿಟಿಯೂ ಕೂಡ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಬಂದ್ ನಿಂದ ಹಲವು ಸೇವೆಗಳು ವ್ಯತ್ಯವಾಗಲಿದ್ದು, ಅನಾನುಕೂಲತೆಯಾಗುವುದರಿಂದ ಮುಂಜಾಗೃತಾ ಕ್ರಮವಾಗಿ ಪರೀಕ್ಷೆ ಮುಂದೂಡುವ ಸಾಧ್ಯತೆ ಹೆಚ್ಚಿದೆ ಎಂದು ವಿಟಿಯು ಕುಲಪತಿ ಕರಿಸಿದ್ದಪ್ಪ ಸುವರ್ಣ ನ್ಯೂಸ್.ಕಾಂ ಗೆ ಮಾಹಿತಿ ನೀಡಿದ್ದಾರೆ.

ನಾಳೆ ಭಾರತ್ ಬಂದ್ : ಶಾಲಾ-ಕಾಲೇಜುಗಳಿಗೆ ಇರುತ್ತಾ ರಜೆ..?

ಕುವೆಂಪು ವಿವಿ ಪರೀಕ್ಷೆ ಮುಂದೂಡಿಕೆ : ಭಾರತ್ ಬಂದ್ ಹಿನ್ನೆಲೆ ಜನವರಿ 8 ಹಾಗೂ 9 ರಂದು ನಡೆಯಬೇಕಿದ್ದ ಕುವೆಂಪು ವಿಶ್ವವಿದ್ಯಾಲಯದ ಬಿಎಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಮುಂದೂಡಿಕೆಯಾದ ಪರೀಕ್ಷೆಗಳು ಇದೇ ತಿಂಗಳ 20 ಮತ್ತು 21 ಕ್ಕೆ ನಡೆಯಲಿವೆ ಎಂದು ಕುವೆಂಪು ವಿವಿ ಕುಲ ಸಚಿವ ಪ್ರೋ ಜೋಗನ್ ಶಂಕರ್ ಹೇಳಿದ್ದಾರೆ.

Leave A Reply

Your email address will not be published.