ಬೆಂಗಳೂರು ಕವಿವೃಕ್ಷ ಬಳಗ, ಹೆಚ್ ಎಸ್ ಆರ್ ಎ ಪ್ರಕಾಶನ ಮೂಲಕ ಮೊಳಗಿದ ಸಂಕ್ರಾಂತಿಯ ಸಾಹಿತ್ಯ ಸುಗ್ಗಿ

4,812

ಬೆಂಗಳೂರು : ಸಂಕ್ರಾಂತಿ ಸಮೀಪಿಸುತ್ತಿರುವ ದಿನಗಳಲ್ಲಿ ಸಾಹಿತ್ಯದ ಜೊತೆಗೆ ಸಂಕ್ರಾಂತಿಯ ಸವಿಯುಣಿಸುವ ಕಾರ್ಯಕ್ರಮ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ನ ಕೃಷ್ಣರಾಜ ಪರಿಷ್ನಂದಿರದಲ್ಲಿ ನೆಡೆಯಿತು.

ಬೆಂಗಳೂರು ಕವಿವೃಕ್ಷ ಬಳಗ ಮತ್ತು ಹೆಚ್ ಎಸ್ ಆರ್ ಎ ಪ್ರಕಾಶನದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ, ಪುಸ್ತಕ ಲೋಕಾರ್ಪಣೆ, ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಸಂಕ್ರಾಂತಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಈ ಕಾರ್ಯಕ್ರಮವನ್ನು ಕವಿವೃಕ್ಷ ಬಳಗದ ರಾಜ್ಯಾಧ್ಯಕ್ಷರಾದ ಪ್ರೊ.ವೀರೇಶ್ ಹಿತ್ತಲಮನಿ ಉದ್ಘಾಟನೆ ಮಾಡಿದರೇ.. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಲನಚಿತ್ರ ಗೀತ ರಚನೆಕಾರ ಮತ್ತು ನಿರ್ದೇಶಕ ಹೃದಯ ಶಿವ ವಹಿಸಿದ್ದರು.

ಇದೇ ವೇಳೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತ ಲೇಖಕರನ್ನು ಮತ್ತು ಕವಿಗಳನ್ನು ಗುರುತಿಸಿ ಸಂಕ್ರಾಂತಿಯ ಸಾಹಿತ್ಯ ಸುಗ್ಗಿಯಲ್ಲಿ, ಕನ್ನಡ ಸಾಹಿತ್ಯ ಕೌಸ್ತುಭ ಪ್ರಶಸ್ತಿ, ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ, ಸಾಹಿತ್ಯ ಕಲಾ ಸಾಮ್ರಾಟ ಪ್ರಶಸ್ತಿ ಹಾಗೂ ಉದಯೋನ್ಮುಖ ಸಾಹಿತ್ಯ ಪ್ರತಿಭೆಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಸಾಹಿತಿಗಳು.. ಬರಹಗಾರರು ಸೇರಿದಂತೆ ಅನೇಕರು ಭಾಗವಹಿಸಿದ್ದರು..

Leave A Reply

Your email address will not be published.