ಚುನಾವಣೆ ವಿಷಯ ರಾಮ ಮಂದಿರವೋ, ಶಬರಿಮಲೆಯೋ? ಅಮರ್ತ್ಯ ಸೇನ್‌ ಪ್ರಶ್ನೆ

3,771

2019ರ ಲೋಕಸಭಾ ಚುನಾವಣೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಷಯ ಮುಖ್ಯವಾಗುವುದೋ ಅಥವಾ ಮುಟ್ಟಿಗೊಳಗಾಗುವ ವಯೋಮಾನದ ಮಹಿಳೆಯರ ಶಬರಿಮಲೆ ದೇವಳ ಪ್ರವೇಶ ಮುಖ್ಯವಾಗುವುದೋ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್‌ ಪ್ರಶ್ನಿಸಿದ್ದಾರೆ.

ಮಹಾ ಚುನವಾಣೆಗಳು ಸನ್ನಿಹಿತವಾಗುವಾಗ ಯಾವ ವಿಷಯಗಳು ಮುಖ್ಯವಾಗುತ್ತವೆ ಎನ್ನುವ ಬಗ್ಗೆ ಕಾತರತೆ ಇರುತ್ತದೆ. ಆದರೆ ಮಹಾ ಚುನಾವಣೆಗಳ ಸಂದರ್ಭದಲ್ಲಿ ಬೇರೆ ದೇಶಗಳಲ್ಲಿ ಮುಖ್ಯವಾಗುವ ರೀತಿಯ ವಿಷಯಗಳು ಭಾರತದಲ್ಲಿ ಮುಖ್ಯವಾಗುವುದಿಲ್ಲ ಎಂದು ಅನ್ನಿಸುತ್ತದೆ. ಉದಾಹರಣೆಗೆ ಭಾರತದಲ್ಲಿ ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮುಖ್ಯವೋ ಅಥವಾ ಮುಟ್ಟಿಗೊಳಗಾಗುವ ವಯೋಮಾನದ ಹೆಂಗಸರ ಶಬರಿಮಲೆ ದೇವಳ ಪ್ರವೇಶ ಮುಖ್ಯವೋ ಎಂಬ ಪ್ರಶ್ನೆ ಎದುರಾಗುತ್ತಿದೆ ಎಂದು ಅಮರ್ತ್ಯ ಸೇನ್‌ ಹೇಳಿದರು.

ಜನರ ಅಭಿಪ್ರಾಯಗಳನ್ನು ಸಹಿಸದಿರುವುದು ಮತ್ತು ಜನರಿಗೆ ಕಿರುಕುಳ ನೀಡುವುದು ಎಷ್ಟು ಮಾತ್ರಕ್ಕೂ ಸ್ವೀಕಾರಾರ್ಹವಲ್ಲ. ದೇಶದಲ್ಲಿ ಪ್ರಕೃತ ಇರುವ ಈ ಸ್ಥಿತಿ ಬದಲಾಗಬೇಕು ಎಂದು ಅಮರ್ತ್ಯ ಸೇನ್‌ ಹೇಳಿದರು.

ದೇಶದಲ್ಲಿನ ಅನೇಕ ವಿಶ್ವವಿದ್ಯಾಲಯದ ಸ್ವಾಯತ್ತೆ ಮತ್ತು ಸ್ವಾತಂತ್ರ್ಯ ವಂಚಿತವಾಗಿ ನರಳುತ್ತಿವೆ; ದೇಶದ ಪ್ರಜಾಸತ್ತೆಯ ಇತರ ಸಂಸ್ಥೆಗಳು ಕೂಡ ಆರಾಮದಾಯಕ ಸ್ಥಿತಿಯಲ್ಲಿ ಇಲ್ಲ ಎಂದು ಸೇನ್‌ ಹೇಳಿದರು.

ಲೋಕಸಭಾ ಚುನಾವಣೆಯನ್ನು ದೇಶ ಎದುರು ನೋಡುತ್ತಿರುವ ಇಂದಿನ ಸಂದರ್ಭದಲ್ಲಿ ಪತ್ರಕರ್ತರು ಕೂಡ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ; ಇದು ನಿಜಕ್ಕೂ ಸ್ವೀಕಾರಾರ್ಹವಲ್ಲ; ಮುಂದೇನಾಗುವುದೋ ಕಾದು ನೋಡೋಣ’ ಎಂದು ಅಮರ್ತ್ಯ ಸೇನ್‌ ಹೇಳಿದರು.

Leave A Reply

Your email address will not be published.