ಮತ್ತೆ ಕಣ್ಮಿಟುಕಿಸಿದ ರಾಹುಲ್, ‘ನೆರವು’ ಬೇಡಿದ ಬಿಜೆಪಿ!

4,115

ಮುಂಗಾರು ಅಧಿವೇಶನದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿ ತಬ್ಬಿಬ್ಬು ಮಾಡಿ, ನಂತರ ಕಣ್ಮಿಟುಕಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚಳಿಗಾಲದ ಅಧಿವೇಶನದಲ್ಲೂ ಕಣ್ಮಿಟುಕಿಸಿ ಸುದ್ದಿಯಾಗಿದ್ದಾರೆ!

ರಫೇಲ್ ಡಿಲ್ ಕುರಿತಂತೆ ಎಐಎಡಿಎಂಕೆ ಸಂಸದ ಮತ್ತು ಲೋಕಸಭೆಯ ಉಪ ಸ್ಪೋಕರ್ ಎಂ ತಂಬಿ ದುರೈ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರ ಮಾತುಕೇಳಿ ಉದ್ವೇಗಕ್ಕೊಳಗಾದ ರಾಹುಲ್ ಗಾಂಧಿ ಟೇಬಲ್ ತಟ್ಟಿ, ನಂತರ ತಮ್ಮ ಪಕ್ಕದಲ್ಲಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕಣ್ಮಿಟುಕಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ಅಮಿತ್ ಮಾಳವೀಯ, ‘ರಾಹುಲ್ ಗಾಂಧಿ ಮತ್ತೆ ಕಣ್ಮಿಟುಕಿಸಿದ್ದಾರೆ. ಅದೂ ರಫೇಲ್ ಡಿಲ್ ಬಗ್ಗೆ ಅತ್ಯಂತ ಗಂಭೀರ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ! ಅವರಿಗೆ ನಿಜಕ್ಕೂ ನೆರವಿನ ಅಗತ್ಯವಿದೆ ಎನ್ನಿಸುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಮತ್ತೊಮ್ಮೆ ಕಣ್ಮಿಟುಕಿಸಿದ ವಿಡಿಯೋ ಸಹ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

2018 ರ ಜುಲೈ ತಿಂಗಳಿನಲ್ಲಿ ಲೋಕಸಭೆಯಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದ್ದ ಸಮಯದಲ್ಲಿ ಮೋದಿ ಅವರನ್ನು ಅಪ್ಪಿಕೊಂಡ ರಾಹುಲ್ ಗಾಂಧಿ, ನಂತರ ತಮ್ಮ ಸ್ಥಳದಲ್ಲಿ ಕುಳಿತುಕೊಂಡು ಕಣ್ಮಿಟುಕಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.ವಕಿಲ್ ಭಾರತಿ 
ಸಂಸತ್ತನ್ನು ಏನೆಂದುಕೊಂಡಿದ್ದಾರೆ?

ಜನರು ಸಾರ್ವಜನಿಕ ಸ್ಥಳಗಳಲ್ಲಿ ಮತ್ತೊಬ್ಬರನ್ನು ರೇಗಿಸಲು, ಅಣಕಿಸಲು ಕಣ್ಮಿಟುಕಿಸುತ್ತಾರೆ. ಬಹುಷ ರಾಹುಲ್ ಗಾಂಧಿ ಅವರೂ ಸಂಸತ್ತನ್ನು ಸಾರ್ವಜನಿಕ ಕಾರ್ಯಕ್ರಮ ನಡೆವ ಸ್ಥಳ ಎಂದುಕೊಂಡಿರಬೇಕು. ಅದಕ್ಕೆಂದೇ ಈ ರೀತಿ ಕಣ್ಮಿಟುಕಿಸಿ ವಾತಾವರಣ ಹಾಳುಗೆಡವುತ್ತಿದ್ದಾರೆ ಎಂದಿದ್ದಾರೆ ವಕೀಲ್ ಭಾರತಿ ಎಂಬುವವರು.

Leave A Reply

Your email address will not be published.