ಎಸ್ಪಿ, ಬಿಎಸ್ಪಿ ಮಹಾಮೈತ್ರಿಯಿಂದ ಕಾಂಗ್ರೆಸ್ ಔಟ್ ?

5,585

ಜ. 5: ಬದ್ಧ ರಾಜಕೀಯ ವಿರೋಧಿಗಳಾದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಉತ್ತರ ಪ್ರದೇಶದಲ್ಲಿ ಮಹಾಮೈತ್ರಿಗೆ ಮುಂದಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಈ ಕೂಟದಿಂದ ದೂರವಿಡಲು ಉಭಯ ಪಕ್ಷಗಳ ಮುಖ್ಯಸ್ಥರು ನಿರ್ಧಾರಕ್ಕೆ ಬಂದಿದ್ದಾರೆ.

ಶುಕ್ರವಾರ ರಾಜಧಾನಿಯಲ್ಲಿ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಜತೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಕಾಂಗ್ರೆಸ್ ನಡೆಗಳಿಂದ ಬೇಸತ್ತಿರುವ ನಾಯಕರು ಕಾಂಗ್ರೆಸ್ ಹೊರತುಪಡಿಸಿ ಮಹಾಮೈತ್ರಿ ರಚಿಸಲು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಈ ಮೈತ್ರಿಕೂಟದಲ್ಲಿ ಇತರ ಸಣ್ಣ ಪಕ್ಷಗಳನ್ನು ಸೇರಿಸಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ.ಸ್ಥಾನ ಹೊಂದಾಣಿಕೆ ಬಗ್ಗೆ ಜನವರಿ 15ರ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಚೌಧರಿ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ ಕೂಡಾ ಈ ಕೂಟದಲ್ಲಿ ಸ್ಥಾನ ಪಡೆಯಲಿದೆ ಎಂದು ಮೂಲಗಳು ವಿವರಿಸಿವೆ. ಕಾಂಗ್ರೆಸ್ ಪಕ್ಷವನ್ನು ಮೈತ್ರಿಯಿಂದ ಹೊರಗಿಟ್ಟಿದ್ದರೂ, ಪಕ್ಷದ ಭದ್ರಕೋಟೆ ಎನಿಸಿದ ಅಮೇಥಿ ಮತ್ತು ರಾಯಬರೇಲಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರಲು ನಿರ್ಧರಿಸಿವೆ ಎಂದು ಹೇಳಲಾಗಿದೆ.

ಮಧ್ಯಪ್ರದೇಶದಲ್ಲಿ ಪಕ್ಷದ ಏಕೈಕ ಶಾಸಕನನ್ನು ಕಮಲ್‌ನಾಥ್ ಸಂಪುಟಕ್ಕೆ ಸೇರಿಸಿಕೊಳ್ಳದಿರುವುದು ಅಖಿಲೇಶ್ ಮುನಿಸಿಗೆ ಕಾರಣ ಎನ್ನಲಾಗಿದೆ. ಪಕ್ಷಕ್ಕೆ ಬಹುಮತ ದೊರಕಿಸಿಕೊಡುವಲ್ಲಿ ನಮ್ಮ ಪಕ್ಷ ನೆರವಾಗಿದ್ದರೂ, ಕಾಂಗ್ರೆಸ್ ತಾನು ನೀಡಿದ ಆಶ್ವಾಸನೆಗೆ ಬದ್ಧವಾಗಿಲ್ಲ ಎಂದು ಅಖಿಲೇಶ್ ಕಳೆದ ವಾರ ಆಕ್ಷೇಪಿಸಿದ್ದರು.

ಮಾಯಾವತಿ ಕೂಡಾ ಕಾಂಗ್ರೆಸ್ ಜತೆಗಿನ ಚುನಾವಣಾಪೂರ್ವ ಮೈತ್ರಿಯನ್ನು ತಳ್ಳಿಹಾಕಿದ್ದರೂ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದರು. ಆದರೆ ಕಳೆದ ಏಪ್ರಿಲ್‌ನಲ್ಲಿ ದಲಿತರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ನೂತನ ಸರ್ಕಾರ ವಾಪಾಸು ಪಡೆಯದಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಬೆಂಬಲವನ್ನು ಮರುಪರಿಶೀಲಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 73ನ್ನು ಗೆದ್ದಿದ್ದ ಉತ್ತರ ಪ್ರದೇಶದಲ್ಲಿ ಎಸ್ಪಿ- ಬಿಎಸ್ಪಿ ಮೈತ್ರಿಕೂಟ ಈ ಬಾರಿ ಬಿಜೆಪಿಗೆ ದೊಡ್ಡ ತಲೆನೋವಾಗಲಿದೆ

Leave A Reply

Your email address will not be published.