ಬಿಜೆಪಿ ಶಾಸಕನ ಉಗ್ರ ಸಂಪರ್ಕದ ಬಗ್ಗೆ ತನಿಖೆ ನಡೆಯಲಿ: ಕಾಂಗ್ರೆಸ್ ನಾಯಕ ರಾಜ್ ಬಬ್ಬರ್

3,974

ಜ.4: ಭಾರತದಲ್ಲಿ ಅಸುರಕ್ಷಿತ ಭಾವನೆ ಹೊಂದಿರುವವರಿಗೆ ತಾನು ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ ಬಿಜೆಪಿ ಶಾಸಕ ವಿಕ್ರಮ್ ಸೈನಿಯನ್ನು ಬಂಧಿಸಬೇಕು ಮತ್ತು ಆತನಿಗಿರುವ ಉಗ್ರರ ಸಂಪರ್ಕದ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಹೇಳಿದ್ದಾರೆ.

“ಮುಖ್ಯಮಂತ್ರಿ ಆದಿತ್ಯನಾಥ್ ಥೋಕ್ ದೋ ಎನ್ನುತ್ತಿದ್ದಾರೆ. ಸಚಿವನಾಗಲು ಬಯಸಿರುವ ಶಾಸಕ ಬಾಂಬ್ ಹಾಕುವುದಾಗಿ ಹೇಳುತ್ತಾರೆ. ಅವರನ್ನು ಬಂಧಿಸಬೇಕು ಹಾಗು ಶಿಕ್ಷೆ ವಿಧಿಸಬೇಕು. ಉಗ್ರರ ರೀತಿ ಮಾತನಾಡಿರುವುದರಿಂದ ಆತನಿಗಿರುವ ಉಗ್ರ ಸಂಪರ್ಕದ ಬಗ್ಗೆ ತನಿಖೆ ನಡೆಸಬೇಕು” ಎಂದವರು ಹೇಳಿದರು.

Leave A Reply

Your email address will not be published.