ಕೇರಳದಲ್ಲಿ ಹರತಾಳ: 801 ಪ್ರಕರಣ ದಾಖಲು, 1369 ಮಂದಿ ಬಂಧನ

4,458

ತಿರುವನಂತಪುರಂ: ಕೇರಳದಲ್ಲಿ ಗುರುವಾರ ನಡೆದ ಹರತಾಳದ ವೇಳೆ ನಡೆದ ಹಿಂಸಾಚಾರದಲ್ಲಿ ಶುಕ್ರವಾರದವರೆಗೆ 1369 ಮಂದಿಯನ್ನು ಬಂಧಿಸಲಾಗಿದೆ. 717 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು 801 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಈ ಪ್ರಕರಣಗಳಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದಿದ್ದಾರೆ ಪೊಲೀಸರು.

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿರುವುದನ್ನು ಖಂಡಿಸಿ ಕೇರಳದಲ್ಲಿ ಹರತಾಳ ದಿನದಂದು ನಡೆದ ಹಿಂಸಾಚಾರಗಳ ಬಗ್ಗೆ ವರದಿ ಸಲ್ಲಿಸುವಂತೆ ಡಿಜಿಪಿ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದರು. ವ್ಯಾಪಾರಿಗಳು ಅಂಗಡಿ ತೆರೆಯಲು ತೀರ್ಮಾನಿಸಿದ್ದರೂ ಕೆಲವಡೆ ಅಂಗಡಿ ವ್ಯಾಪಾರಿಗಳ ವಿರುದ್ಧ ಪ್ರತಿಭಟನೆ ನಡೆದಿತ್ತು.

ಕೋಯಿಕ್ಕೋಡ್ ಮಿಠಾಯಿ ರಸ್ತೆಯಲ್ಲಿ ಅಂಗಡಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆದಾಗ ಪೊಲೀಸರಿಗೆ ಅದನ್ನು ತಡೆಯಲು ಸಾಧ್ಯವಾಗಿಲ್ಲ. ಪೊಲೀಸರ ಕರ್ತವ್ಯ ಲೋಪ ಎಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಬಗ್ಗೆ ಡಿಜಿಪಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.