ಜ.10ರಂದು ನಡೆಯಲಿರುವ ಜಿ.ಎಸ್.ಟಿ. ಸಭೆಯಲ್ಲಿ ಸಿಗಲಿದೆ ‘ಗುಡ್ ನ್ಯೂಸ್’

6,324

ಜಿಎಸ್ಟಿ ಕೌನ್ಸಿಲ್ ನ ಮುಂದಿನ ಸಭೆ ಜನವರಿ 10ರಂದು ನಡೆಯಲಿದೆ. ಈ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ನಿರ್ಮಾಣ ಫ್ಲಾಟ್ ಹಾಗೂ ಮನೆಗಳ ಜಿಎಸ್ಟಿ ದರವನ್ನು ಶೇಕಡಾ 5ಕ್ಕೆ ಇಳಿಸುವ ಸಾಧ್ಯತೆಯಿದೆ. ಸದ್ಯ ಇವೆರಡೂ ಜಿಎಸ್ಟಿ 12ರ ಪಟ್ಟಿಯಲ್ಲಿವೆ.

ಇದಲ್ಲದೆ ಜಿಎಸ್ಟಿ ಕೌನ್ಸಿಲ್ ನ 32ನೇ ಸಭೆಯಲ್ಲಿ ಸಣ್ಣ ಉದ್ಯಮಿಗಳಿಗೆ ವಿನಾಯಿತಿ ಸಿಗುವ ಸಾಧ್ಯತೆಯಿದೆ. ಕೇಂದ್ರ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಸದ್ಯ ಅಸ್ತಿತ್ವದಲ್ಲಿರುವ ನೋಂದಣಿ ದರವನ್ನು 20 ಲಕ್ಷದಿಂದ 75 ಲಕ್ಷಕ್ಕೆ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಸಂಯೋಜನಾ ಯೋಜನೆಯಡಿ ಸಣ್ಣ ಸೇವಾ ಪೂರೈಕೆದಾರರಿಗೆ ಒಂದೇ ರೀತಿಯ ತೆರಿಗೆ ಜಾರಿಗೆ ಬರುವ ಸಾಧ್ಯತೆಯಿದೆ.

ಕಳೆದ ಸಭೆಯಲ್ಲಿ 23 ವಸ್ತು ಮತ್ತು ಸೇವೆಗಳ ಜಿಎಸ್ಟಿ ಬೆಲೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಜೊತೆಗೆ ಜಿಎಸ್ಟಿ ಫಾರ್ಮ್ ತುಂಬುದ ಅಂತಿಮ ದಿನವನ್ನು ಮುಂದೂಡಲಾಗಿದೆ.

Leave A Reply

Your email address will not be published.