ಪಾಟೀಲ್ ಗೆ ಕಾಂಗ್ರೆಸ್ ನಲ್ಲಿ ನೂತನ ಸಾರಥ್ಯ : ರಾಹುಲ್ ಭೇಟಿ

4,673

ನವದೆಹಲಿ : ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ನ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವರಾದ ಎಸ್. ಎಂ.ಕೃಷ್ಣ, ಜನಾ ರ್ದನ ಪೂಜಾರಿ, ಸಚಿವ ಡಿ.ಕೆ. ಶಿವಕುಮಾರ್ ಮುಂತಾದವರು ಕಾರ್ಯನಿರ್ವಹಿಸಿದ್ದರು.

ಅದೇ ರೀತಿಯಾಗಿ ಇದೀಗ ವಿವಿಧ ರಾಜ್ಯ ಗಳಲ್ಲಿ ರಚಿಸಲಾಗಿರುವ ಕಾಂಗ್ರೆಸ್ ಪ್ರಚಾರ ಸಮಿತಿಯ ನೇತೃತ್ವವನ್ನು ಘಟಾನುಘಟಿ ನಾಯಕರಿಗೆ ನೀಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ನೂತನ ಮುಖ್ಯಸ್ಥ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Leave A Reply

Your email address will not be published.