‘ ದೋಸ್ತಿ ಸರ್ಕಾರ ಪತನವಾದ್ರೆ ಮೋಸ್ಟ್ ಹ್ಯಾಪಿಯೆಸ್ಟ್ ಪರ್ಸನ್’ ಯಾರು ಗೊತ್ತಾ?

3,088

ಬೆಂಗಳೂರು: ದೋಸ್ತಿ ಸರ್ಕಾರ ಪತನವಾದ್ರೆ ಮೋಸ್ಟ್ ಹ್ಯಾಪಿಯೆಸ್ಟ್ ಪರ್ಸನ್’ ಯಾರು ಅಂದ್ರೆ ಅದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಯವರಂತೆ. ಹೌದು, ಈ ಬಗ್ಗೆ ಅವರು ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಬಿ.ಜೆ.ಪುಟ್ಟಸ್ವಾಮಿ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಹೇಳಿದರು.

ಇದೇ ವೇಳೆ ಅವರು ಮಾತನಾಡಿ ಕುಮಾರಸ್ವಾಮಿಯವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಕ್ಕೆ ಬರುವ ಕನಸು ಅವರಲ್ಲಿರಲಿಲ್ಲ. ಹಾಗಾಗಿ ಅವರು ಬಹಳ ಸುಲಭವಾಗಿ ಆಶ್ವಾಸನೆಗಳನ್ನು ಕೊಟ್ಟಿದ್ದಾರೆ ಅಂತ ಹರಿಹಾಯ್ದರು.

ಇನ್ನು ರಾಜ್ಯದ ಜನಸಂಖ್ಯೆಯಲ್ಲಿ ಶೇ. 32.8ರಷ್ಟು ಹಿಂದುಳಿದ ವರ್ಗದ ಜನರಿದ್ದಾರೆ. ಈಗಾಗಲೇ ರಾಜ್ಯ, ಜಿಲ್ಲೆ, ಮಂಡಲ, ಬೂತ್ ಮಟ್ಟದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಸಕ್ರಿಯವಾಗಿದೆ. ಮೊದಲು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತಗಳು ಕಡಿಮೆ ಆಗಿರುವ ಕಡೆ ಸಮಿತಿಗಳನ್ನ ಬಲಪಡಿಸ್ತೀವಿ ಅಂತ ಹೇಳಿದರು.

Leave A Reply

Your email address will not be published.